ಹೊನ್ನಾವರ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕøತಿ ಸಂಸ್ಕಾರ ಪರಿಸರ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆಯನ್ನು ಹೊನ್ನಾವರ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ವಿಭಾಗದವರಿಗೆ ‘ಜ್ಞಾನಸಿರಿ’ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಜ್ಞಾನ ಐಸಿರಿ’ ಪುಸ್ತಕಗಳನ್ನು ಓದಲು ವಿತರಿಸಿ ಶಾಲಾ ಮಟ್ಟದಲ್ಲಿ ಭಾಷಣ, ಪ್ರಬಂಧ, ಚಿತ್ರಕಲೆ ಮತ್ತು ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳು : ಪ್ರೌಡಶಾಲಾ ವಿಭಾಗದ ಭಾಷಣ ಸ್ಫರ್ಧೆಯಲ್ಲಿ ಆರ್.ವಿಶ್ವಜಿತ್ ಹಡಿನಬಾಳ ಪ್ರಥಮ, ಸಿಂಧು ಡಿ.ಗುನಗಾ ಕರ್ಕಿ ದಿತೀಯ, ಅಂಕಿತಾ ಎ.ಕೋಟೆಬೈಲ್ ತೃತೀಯ, ಪ್ರಬಂಧ ಸ್ಪರ್ಧೆಯಲ್ಲಿ ವಿನಾಯಕ ಎಂ.ಶೆಟ್ಟಿ ಗುಣವಂತೆ ಪ್ರಥಮ, ಸಹನಾ ಎಂ ಗೌಡ ಜಲವಳಕರ್ಕಿ ದ್ವಿತೀಯ, ಶಿವಾನಿ ಬಿ. ನಾಯ್ಕ ಕೊಳಗದ್ದೆ ತೃತೀಯ, ಕಂಠಪಾಠ ಸ್ಪರ್ಧೆಯಲ್ಲಿ ಧನ್ಯಾ ಎಸ್. ಕೋಟೆಬೈಲ್ ಪ್ರಥಮ, ಚೈತ್ರ ನಾಯ್ಕ ಅಳ್ಳಂಕಿ ದ್ವಿತೀಯ, ತೇಜಾ ಎ. ಹೆಗಡೆ ಕೊಳಗದ್ದೆ ತೃತೀಯ, ಚಿತ್ರಕಲೆ ಸ್ಪರ್ಧೆಯಲ್ಲಿ ವಿವೇಕಾನಂದ ಎಂ.ನಾಯ್ಕ ಎನ್ಇಎಸ್ ಹೊನ್ನಾವರ ಪ್ರಥಮ, ನಿತೀಶ್ ಎಸ್. ಆಚಾರಿ ಜಲವಳಕರ್ಕಿ ದ್ವಿತೀಯ, ಪ್ರಶಾಂತ ಬಿ.ಗೌಡ ಕರ್ಕಿ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಶ್ರೀನಿಧಿ ಆರ್.ಹೆರಂಗಡಿ ಪ್ರಥಮ, ವಿನೇಮಾ ಎಸ್.ಕೆ ಬಣಸಾಲೆ ದ್ವಿತೀಯ, ಸಂದೇಶ ಚಂದ್ರಕಾಂತ ನಾಯ್ಕ ಕೆಳಗಿನೂರು ತೃತೀಯ, ಪ್ರಬಂಧ ಸ್ಪರ್ಧೆಯಲ್ಲಿ ಆದರ್ಶ ಮಂಜುನಾಥ ಶೆಟ್ಟಿ, ಗುಣವಂತೆ ಪ್ರಥಮ, ನಾಗರತ್ನಾ ನಾಗರಾಜ್ ಮಹಾಲೆ ಬಣಸಾಲೆ ದ್ವಿತೀಯ, ಅನುಷಾ ಸಂತೋಷ ನಾಯ್ಕ ಹೊಸಪಟ್ಟಣ ತೃತೀಯ, ಕಂಠಪಾಠ ಸ್ಪರ್ಧೆಯಲ್ಲಿ ಕವಿತಾ ಗಜಾನನ ಗೌಡ ಗುಣವಂತೆ ಪ್ರಥಮ,, ಜಿ.ವಂದನಾ ಕೆಂಚಗಾರು ದ್ವಿತೀಯ, ರೋಹಿತ್ ಕೃಷ್ಣ ನಾಯ್ಕ ಸುಳಗೋಡ ತೃತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ಸತ್ಯಪ್ರಸಾದ ನಾಗೇಶ ನಾಯ್ಕ ಕರ್ಕಿ ಪ್ರಥಮ, ಚಂದನಾ ಮಂಜುನಾಥ ಪಟಗಾರ ಗುಣವಂತೆ ದ್ವಿತೀಯ, ಆದರ್ಶ ಈಶ್ವರ ಹರಿಕಾಂತ ಬಣಸಾಲೆ ತೃತೀಯ ಸ್ಥಾನ ಗಳಿಸಿದ್ದಾರೆ.
Leave a Comment