ಹಳಿಯಾಳ: ದೀಪಾವಳಿಯ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಜೂಜಾಟ, ಅಂದರಬಾಹರ, ಮಟಕಾ, ವೈಶ್ಯಾವಾಟಿಕೆ, ಕ್ರೀಕೆಟ್ ಬೆಟ್ಟಿಂಗ್ನಂತಹ ಕಾನೂನು ಬಾಹಿರ ಕೃತ್ಯಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ಮತ್ತೇ ಪ್ರಾರಂಭವಾಗಿದ್ದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಬಿಜೆಪಿ ಘಟಕ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಅನೇಕ ಸಂಘಟನೆಗಳ ಎಚ್ಚರಿಕೆಪೂರ್ವಕ ಆಗ್ರಹ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ದೀಪಾವಳಿ ಹಬ್ಬದ ಬಳಿಕ ಪೋಲಿಸ್ ಇಲಾಖೆ ಜೂಜಾಟದಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿತ್ತು ಆದರೇ ಇದಿಗ ಅವುಗಳು ಮತ್ತೇ ನಿರಂತರವಾಗಿ ಅಲ್ಲಲ್ಲಿ ನಡೆಯುತ್ತಿರುವುದರ ಬಗ್ಗೆ ಜನತೆಯಿಂದ ಮಾಹಿತಿಗಳು ಲಭ್ಯವಾಗುತ್ತಿವೆ. ಹಳಿಯಾಳದ ದಕ್ಷ ಪೋಲಿಸ್ ಅಧಿಕಾರಿಗಳು ಹಳಿಯಾಳದಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿರುವ ವೈಶ್ಯಾವಾಟಿಕೆ, ಜೂಜಾಟ, ಓಸಿ, ಮಟಕಾ, ಕ್ರಿಕೆಟ್ ಬೆಟ್ಟಿಂಗ್ನಂತಹಅಕ್ರಮ ಚಟುವಟಿಕೆಗಳಿಗೆ ಬೇಗೆನೆ ಎಚ್ಚೆತ್ತುಕೊಂಡು ಕಠಿಣ ಕ್ರಮ ಜರುಗಿಸಿ ಇದರ ಸೂತ್ರಧಾರಿಗಳನ್ನು ಬಂಧಿಸಿ ಅಕ್ರಮಗಳಿಗೆ ಕಡಿವಾಣಹಾಕಬೇಕು ಎಂದು ಹಳಿಯಾಳದ ಪ್ರಜ್ಞಾವಂತ ನಾಗರೀಕರು, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮೀತಿ, ಕೆಂಪು ಸೇನೆ ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿವೆ.
Leave a Comment