ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಹಳಿಯಾಳ ಬಿಜೆಪಿ ಘಟಕ ಖಂಡಿಸುತ್ತದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದಲ್ಲಿ ಭಾನುವಾರ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆನರಾ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಿಲ್ಲೆಗೆ ಏನು ಮಾಡಿಲ್ಲ ಅವರೊಬ್ಬ ನಾಲಾಯ್ಕ ಸಂಸದ ಎಂದು ಹೇಳಿಕೆ ನೀಡುರುವುದನ್ನು ತಾವು ಬಲವಾಗಿ ಖಂಡಿಸುತ್ತೇವೆ ವಿಪ ಸದಸ್ಯ ಘೋಟ್ನೇಕರ ಅವರು ತಮ್ಮ ಘನತೆಯನ್ನು ಅರಿತು ಮಾತನಾಡಬೇಕು ಇಲ್ಲವಾದಲ್ಲಿ ಊಗ್ರವಾದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅನಂತಕುಮಾರ ಹೆಗಡೆ ಅವರು 5 ಬಾರಿ ಸಂಸದರಾಗಿ ಆಯ್ಕೆಯಾಗಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭೀವೃದ್ದಿ ಕಾರ್ಯ ಮಾಡಿದ್ದಾರೆ ಆದರೇ ಆರ್.ವಿ.ದೇಶಪಾಂಡೆ ಅವರ ನೆರಳಿನಲ್ಲಿ ಬೆಳೆಯುತ್ತಿರುವ ಘೋಟ್ನೇಕರ ಅವರು ತಮ್ಮ 10 ವರ್ಷದ ವಿಧಾನ ಪರಿಷತ್ ಸದಸ್ಯ ಅವಧಿಯಲ್ಲಿ ಹಾಗೂ ನಿರಂತರವಾಗಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಹುದ್ದೇಯಲ್ಲಿದ್ದುಕೊಂಡು ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಿರಾ ಹಾಗೂ ಹಿಂದಿನ ಚುನಾವಣೆ ಹಾಗೂ ಪ್ರಸ್ತುತ ಎಮ್.ಎಲ್.ಸಿ.ಚುನಾವಣೆಯಲ್ಲಿ ನೀಡಿದ ಆಸ್ತಿ ವಿವರಗಳನ್ನು ಘೋಟ್ನೇಕರ ಬಹಿರಂಗಪಡಿಸಲಿ ಜನಪರ ಕೆಲಸ ಮಾಡುತ್ತೇನೆ ಎನ್ನುವವರು ಇಷ್ಟೊಂದು ಪ್ರಮಾಣದ ಆಸ್ತಿ ಗಳಿಸಿದ್ದು ಹೇಗೆ ಎಂದು ಪ್ರಶ್ನೀಸಿದ ಅವರು ಸಂಸದರ ಅಣ್ಣ, ತಮ್ಮಂದಿರು ಹಾಗೂ ಮಕ್ಕಳ ಹೆಸರಲ್ಲಿ ಯಾವುದೇ ಗುತ್ತಿಗೆ ಕೆಲಸ ಮಾಡೊಲ್ಲ ಅವರ್ಯಾರು ಸಂಘ ಸಂಸ್ಥೆಗಳ ಅಧ್ಯಕ್ಷರಿಲ್ಲ ಬದಲಾಗಿ ಸಮಾಜ ಸೇವೆ ಮಾತ್ರ ಮಾಡುತ್ತಾರೆ ಎಂಬುದನ್ನು ಘೋಟ್ನೇಕರ ಅರಿಯಲಿ ಎಂದು ಟಿಕಿಸಿದರು. ಕಾಳಿನದಿ ನೀರಾವರಿ ಯೋಜನೆ ಕೇವಲ ಚುನಾವಣೆ ಗಿಮಿಕ್ ಆಗಿದೆ ಹೊರತು ಯೋಜನೆ ಅನುಷ್ಠಾನ ಮಾಡಿ ರೈತರ ಹೊಲಗಳಿಗೆ ನೀರು ಹರಿಸುವ ಯಾವುದೇ ಇಚ್ಚಾಶಕ್ತಿ ಸಚಿವ ದೇಶಪಾಂಡೆ ಅವರಿಗಿಲ್ಲ ಒಂದಾನುವೇಳೆ ಇಚ್ಚಾಶಕ್ತಿ ಇದ್ದಿದ್ದೇ ಆಗಿದ್ದರೇ 2013-14ರಲ್ಲೇ ಈ ಯೋಜನೆ ಅನುಷ್ಠಾನಗೊಳ್ಳುತ್ತಿತ್ತು ಈಗ ಚುನಾವಣೆ ಸಮಯದಲ್ಲಿ ಕ್ಷೇತ್ರದ ಜನರ ದಿಕ್ಕು ತಪ್ಪಿಸಲು ಮುಖ್ಯಮಂತ್ರಿಗಳಿಂದ ಯೋಜನೆಗೆ ಚಾಲನೆ ದೊರೆಯುತ್ತಿದೆ ಎಂದು ಪ್ರಚಾರ ಮಾಡುತ್ತಿದ್ದು ಇದು ಕೇವಲ ಚುನಾವಣೆ ಗಿಮಿಕ್ ಆಗಿದೆ ಹಾಗೂ ದೇಶಪಾಂಡೆ ಅವರ ಭೋಗಸ್ ಯೋಜನೆ ಆಗಿದೆ ಎಂಬುದನ್ನು ತಾವು ಸಾಬಿತು ಪಡಿಸುವುದಾಗಿ ಹೇಳಿದ ಸುನಿಲ್ ಹೆಗಡೆ ಚುನಾವಣೆಗೂ ಮುನ್ನ ಕಾಳಿನದಿ ನೀರಾವರಿ ಯೋಜನೆ ಮೂಲಕ ಉದ್ದೇಶಿತ ಹೊಲಗಳ ರೈತರ ಗದ್ದೆಗಳಿಗೆ ನೀರು ಹರಿಸಿದರೇ ದೇಶಪಾಂಡೆ ಅವರನ್ನು ಅಂಬಾರಿಯ ಮೇಲೆ ಮೆರವಣಿಗೆ ಮಾಡುವ ಹೇಳಿಕೆಗೆ ತಾವು ಈಗಲೂ ಬದ್ದರಿರುವುದಾಗಿ ಹೇಳಿದ ಅವರು ಕಾಳಿನದಿ ನೀರಾವರಿ ಯೋಜನೆ ಜಾರಿ ಮಾಡಿ ಹೊಲಗಳಿಗೆ ನೀರು ತಂದ ಬಳಿಕವೇ ನಿಮ್ಮ ಬಳಿ ಮತ ಕೇಳಲು ಬರುತ್ತೇನೆಂದು ಸಭೆ ಸಮಾರಂಭಗಳಲ್ಲಿ ಹೇಳಿಕೆ ನೀಡಿದ್ದ ದೇಶಪಾಂಡೆ ಅವರು ಕಿಂಚಿತ್ತಾದರೂ ಆತ್ಮಾಭಿಮಾನ, ನೈತಿಕತೆ ಇದ್ದರೇ ಚುನಾವಣೆಗೆ ಸ್ಪರ್ದಿಸದೆ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಸವಾಲ್ ಹಾಕಿದರು. ಎಮ್.ಎಲ್.ಸಿ ಘೋಟ್ನೇಕರ ಹಾಗೂ ಸಚಿವ ದೇಶಪಾಂಡೆ ಕೃಪಾ ಪೋಷಿತ ರಾಜಕೀಯ ನಾಟಕ ಕಂಪೆನಿಗೆ ಈ ಬಾರಿ ಹಳಿಯಾಳ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದು ಮನೆಗೆ ಕಳುಹಿಸಲಿದ್ದಾರೆಂದು ಗೇಲಿ ಮಾಡಿದರು. ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಎಸ.ಎ.ಶೆಟವಣ್ಣವರ, ಅನಿಲ ಮುತ್ನಾಳ್, ಇಲಿಯಾಸ ಬಳಗಾರ, ಅಜೊಬಾ ಕರಂಜೆಕರ ಇತರರು ಇದ್ದರು.
Leave a Comment