ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಬೃಹತ್ ಎಲ್ಇಡಿ ಪರದೆ ಸಹಿತ ವಿಶೇಷ ಸಂಚಾರಿ ವಾಹನದ ಮೂಲಕ ಸರಕಾರಿ ಯೋಜನೆಗಳ ಪ್ರಚಾರಕ್ಕಾಗಿ ಹಮ್ಮಿಕೊಂಡಿರುವ `ಪ್ರಗತಿ ಮಾಹಿತಿ’ ಪ್ರಚಾರಾಂದೋಲನ ಜಿಲ್ಲಾಧಿಕಾರಿ ಕಚೇರಿ ಆವರಣೆದಲ್ಲಿ ಹಸಿರು ನಿಶಾನೆ ತೋರಿ ಚಾಲನೆ ನೀಡಲಾಯಿತು.
ಜನರ ಹಿತಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಯೋಜನೆಗಳ ಸದ್ಬಳಕೆ ಬಗ್ಗೆ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನಗಳ ಸದ್ಬಳಕೆ ಉತ್ತಮ ಕೆಲಸ. ಬೃಹತ್ ಎಲ್ಇಡಿ ಪರದೆ ಹೊಂದಿರುವ ವಿಶೇಷ ವಾಹನದ ಮೂಲಕ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ವಿಶೇಷವೆಂದರೆ ಹಗಲು ಹೊತ್ತಿನಲ್ಲೂ, ಜನರಿಗೆ ಸರಕಾರದ ಯೋಜನೆಗಳ ಮಾಹಿತಿ ಹೊಂದಿರುವ ವಿಡಿಯೋ ಅನ್ನು ಸಾರ್ವಜನಿಕರು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಈ ವಿಶೇಷ ಪ್ರಚಾರಾಂದೋಲನ ಯಶಸ್ವಿಯಾಗಲಿ ಎಂದು ಶಾಸಕ ಸತೀಶ್ ಸೈಲ್ ಹಾರೈಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಹಿಮಂತರಾಜು ಮಾತನಾಡಿ, ಡಿ.3ರಿಂದ ಡಿ.5 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಆಯ್ದ 45 ಗ್ರಾಮಗಳಲ್ಲಿ ಪ್ರಗತಿ ಮಾಹಿತಿ ವಿಶೇಷ ಪ್ರಚಾರಾಂದೋಲನ ನಡೆಯಲಿದೆ. ಜಿಲ್ಲೆಗೆ ಒಟ್ಟು ನಾಲ್ಕು ಇದೇ ತರಹದ ನಾಲ್ಕು ವಾಹನಗಳಿದ್ದು, ಒಂದೊಂದು ವಾಹನವು ದಿಕ್ಕೆ 5 ಗ್ರಾಮಗಳಲ್ಲಿ ಸಂಚರಿಸಿ ಕಾರ್ಯಕ್ರಮ ಬಿತ್ತರಿಸಲಿದೆ ಎಂದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉಪವಿಭಾಗಾಧಿಕಾರಿಗಳಾದ ರಮೇಶ ಕಳಸದ, ಶಿವಾನಂದ ಕರಾಳೆ, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಯೋಗೇಶ್ವರ, ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ ಇದ್ದರು.
Leave a Comment