ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು. ಪಟ್ಟಣದ ವಿದ್ಯುತ್ ಹೆಸ್ಕಾಂ ಕಾರ್ಯಾಲಯದ ಸಮೀಪ 70 ಲಕ್ಷ ರೂ. ವೆಚ್ಚದಲ್ಲಿ ರಾಜ್ಯ ವಲಯ ಯೋಜನೆಯಡಿ ಮಂಜೂರಾದ ಸರಕಾರಿ ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ಸುಮಾರು 4.50 ಕೋಟಿ ವೆಚ್ಚದಲ್ಲಿ ಕ್ರೀಡಾ ಟ್ರಾಕ್ ನಿರ್ಮಾಣವಾಗುತ್ತಿದೆ ಅದರಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕೂಡಾ ಪ್ರಗತಿಯಲ್ಲಿದ್ದು ಪಟ್ಟಣದಲ್ಲಿ ಇರುವಂತ ಸೌಲಭ್ಯಗಳನ್ನು ಕಾಂಗ್ರೇಸ್ ಸರಕಾರವು ಗ್ರಾಮೀಣ ಭಾಗದಲ್ಲಿಯೂ ನೀಡುವ ಮೂಲಕ ಯಾವುದೇ ಮಕ್ಕಳು ಶಿಕ್ಷಣ, ಕ್ರೀಡೆಯಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸುತ್ತಿದ್ದು ಅಭಿವೃದ್ದಿ ಮಂತ್ರ ಒಂದೆ ಕಾಂಗ್ರೇಸ್ ಸರ್ಕಾರದ ಕಾರ್ಯ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಶಾಲೆ ಉಧ್ಘಾಟನೆಯ ಬಳಿಕ ಬಾಬು ಜಗಜೀವನ ರಾಮ್ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿದ್ದಿ ಸ್ವ-ಸಹಾಯ ಸಂಘಗಳಿಗೆ ಸಚಿವರು ಸಹಾಯ ಧನದ ಆದೇಶ ಪತ್ರ ವಿತರಿಸಿದರು. ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೆಕರ, ತಾ.ಪಂ ಅಧ್ಯಕ್ಷೆ ರೀಟಾ ಸಿದ್ದಿ, ಎಸ್ಡಿಎಮ್ಸಿ ಅಧ್ಯಕ್ಷೆ ಪ್ರೇಮಾ ತೋರಣಗಟ್ಟಿ, ಅರುಣ ಬೊಬಾಟಿ, ಚಂದ್ರು ಪೂಜಾರಿ, ಮಾಲಾ ಬೃಗಾಂಜಾ, ಸಯ್ಯದಅಲಿ ಅಂಕೊಲೆಕರ, ವಕ್ಫ ಬೋರ್ಡ ಜಿಲ್ಲಾಧ್ಯಕ್ಷ ಖಯಾಂ ಮುಗದ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಇತರ ಪ್ರಮುಖರು ಇದ್ದರು.
Leave a Comment