ಹೊನ್ನಾವರ . ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗುಳಿ ಹಾಗೂ ಜೈ ಗಣೇಶ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಮುಗುಳಿಯ 53 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಜೊತೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಶೇ.80% ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಮಂಕಾಳ ವೈದ್ಯ ನಂತರ ಮಾತನಾಡಿ ಒಂದು ಊರಿನ ಶಾಲೆಯನ್ನು ನೋಡಿದರೆ ಆಶ ಊರು ಹೇಗಿದೆ ಎಂದು ತಿಳಿಯಬಹುದು. ಈ ಶಾಲೆಯ ವಾರ್ಷಿಕೋತ್ಸವವನ್ನು ಅಚ್ಚುಕಟ್ಟಾಗಿ ವಿಜೃಂಬಣೆಯಿಂದ ಮಾಡುತ್ತಿರುವುದು ಊರಿನ ಹಾಗೂ ಶಾಲೆಯ ಬಾಂದವ್ಯವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಶಾಲೆ ಊರಿನ ಕೇಂದ್ರಬಿಂದುವಾಗಿದ್ದು ಶಾಲೆಯಲ್ಲಿ ಯಾವುದೇ ಕೊರತೆ ಇರಬಾರದು. ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲದಿದ್ದರೆ ಊರಿನ ಅಭಿವೃದ್ದಿಯಾಗಿದೆ ಎಂದರ್ಥ, ಇಲ್ಲಿನ ಯುವಕ ಸಂಘ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಸೇರಿ ಶಾಲೆಯಲ್ಲಿರುವ ಕುಂದು ಕೊರತೆಗಳನ್ನು ನಿವಾರಿಸಬೇಕು. ಶಾಲೆಯ ಹಾಗೂ ಊರಿನ ಅಭಿವೃದ್ದಿಗೆ ಶಿಕ್ಷಕರ ಪಾತ್ರ ಬಹಳ ಮುಖ್ಯ, ಶಿಕ್ಷಕರಿಂದ ಆಗದಿರುವುದು ಯಾವುದೂ ಇಲ್ಲ, ಅವರು ಶಾಲೆ ಹಾಗೂ ವಿದ್ಯಾರ್ಥಿಗಳಿಗಾಗಿ ತೃಪ್ತಿದಾಯಕವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಹುದ್ದೆಯಲ್ಲಿದ್ದು ಈಡೀ ದೇಶವನ್ನು ಆಳುತ್ತಿದ್ದಾರೆ. ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿತರೆ ಅವನಿಗೆ ಭವಿಷ್ಯದಲ್ಲಿ ಕಷ್ಟ ಎಂದು ಪಾಲಕರು ತಿಳಿದುಕೊಂಡಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡುತ್ತಾರೆ. ತಮ್ಮ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಪಾಲಕರು ಕೂಡ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ತಾಲೂಕಾ ಪಂಚಾಯತ್ ಸದಸ್ಯÀ ಗಣಪಯ್ಯ ಗೌಡ ಮಾತನಾಡಿ ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವಕ್ಕೆ ಮಾತ್ರ ಈ ರೀತಿ ಬೆಂಬಲ ಕೊಡುವುದರ ಜೊತೆಗೆ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮ ಊರಿನ ನಾಗರಿಕೂ ಬೆಂಬಲಿಸಿ ತುಂಬಾ ಅಚ್ಚುಕಟ್ಟಾಗಿ ವಿಜೃಂಬಣೆಯಿಂದ ಕಾರ್ಯಕ್ರಮ ನಡೆಯಲು ಸಹಕರಿಸುತ್ತಾರೆ ಇದು ನನಗೆ ತುಂಬಾ ಸಂತೋಷದ ವಿಚಾರ, ಈ ಶಾಲೆಗೆ ವಿದ್ಯಾರ್ಥಿಗಳ ಪಾಲಕರ ಪೋಷಕರ ಯುವಕರ ಕೊಡುಗೆ ಅಪಾರವಾಗಿದೆ. ಈ ಶಾಲೆಗೆ ಯಾವುದೇ ಕೊರತೆ ಆಗದಂತೆ ನಾವು ನೋಡಿಕೊಂದ್ದೇವೆ. ನಮ್ಮನ್ನು ಒಂದು ಸ್ಥಾನಮಾನಕ್ಕೆ ತಂದ ಶಾಲೆಯನ್ನು ನಾವು ಯಾವತ್ತು ಕೊರತೆ ಆಗದಂತೆ ನೊಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಉತ್ತಮ ಫಲಿತಾಂಶ ಕೊಡುವಂತ ಶಿಕ್ಷಣ ನೀಡಿ ಎಂದರು.
ಈ ಸಂಧರ್ಬದಲ್ಲಿ ದೇವಿ ಗೌಡ, ಸುರೇಶ ನಾಯ್ಕ, ಎಂ.ಎನ್. ಗೌಡ, ಚಂದ್ರಶೇಖರ ಗೌಡ, ವಾಸುದೇವ ನಾಯ್ಕ, ಗಂಗಾಧರ ಗೌಡ ಮುಂತಾದವರು ಉಪಸ್ಥಿತರಿದ್ದರು.
Leave a Comment