ಹೊನ್ನಾವರ: ಶ್ರೀ ಕ್ಷೇತ್ರ ಕರ್ಕಿ ಇದರ ತಾಲೂಕಾ ದೈವಜ್ಞ ವಾಹಿನಿ ಮತ್ತು ತಾಲೂಕಾ ದೈವಜ್ಞ ಮಾತೃವಾಹಿನಿಯ ಸಂಯುಕ್ತ ಆಶ್ರಯದಲ್ಲಿ 11ನೇ ಸಮಾವೇಶ ಶ್ರೀ ಮಠದ ಸಭಾಭವನದಲ್ಲಿ ಫೆ. 4 ರಂದು 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾಗುತ್ತದೆ.
ಸಭಾಕಾರ್ಯಕ್ರಮ ಬೆಳಿಗ್ಗೆ 10-30 ಗಂಟೆಗೆ ಆರಂಭವಾಗಲಿದ್ದು, ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು. ಅತಿಥಿಗಳಾಗಿ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ರಾಘವೇಂದ್ರ ಜನ್ನು, ಬೆಂಗಳೂರಿನ ಉದ್ಯಮಿ ಗಣಪತಿ ಆರ್. ಶೇಟ್, ಶಿವಮೊಗ್ಗದ ನಿರೂಪಕಿ ವಾಗ್ಮಿ ಪ್ರಿಯಾಂಕಾ ಚಂದ್ರಹಾಸ ರಾಯ್ಕರ್ ಪಾಲ್ಗೊಳ್ಳುವರು. ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಜÐವಾಹಿನಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment