ಹೊನ್ನಾವರ, ‘ವಿದ್ಯಾರ್ಥಿಗಳ ಮೇಲಿನ ಹಾಗೂ ಶಾಲೆಯ ಮೇಲಿನ ಪ್ರೀತಿಯಿಂದ ಶಿಕ್ಷಕಿ ಜ್ಯೋತಿ ಪ್ರಭಾ ರವರು ಧ್ವಜಕಟ್ಟೆ ನಿರ್ಮಾಣ ಮಾಡಿ ದೇಣಿಗೆ ನೀಡಿದ್ದಾರೆ. ಇದು ಅವರ ದೇಶಪ್ರೇಮದ ಪ್ರತೀಕ. ಅವರಿಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರತಿದೆ’ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನ್ನಪೂರ್ಣ ಎಸ್ ಶಾಸ್ತ್ರೀ ನುಡಿದರು. ಅವರು ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಜ್ಯೋತಿ ಪ್ರಭಾರವರು ತಮ್ಮ ಪತಿ ಸೈನಿಕರಾಗಿದ್ದ ದಿ||ಜಯಪ್ರಕಾಶರವರ ಸ್ಮರಣಾರ್ಥ ನೂತನವಾಗಿ ನಿರ್ಮಿಸಿಕೊಟ್ಟ ಧ್ವಜಸ್ತಂಭ ಹಾಗೂ ಧ್ವಜಕಟ್ಟೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಜ್ಯೋತಿ ಪ್ರಭಾರವರಿಗೆ ಶಾಲೆಯ ಶಿಕ್ಷಕವೃಂದ ಹಾಗೂ ಎಸ್.ಡಿ.ಎಂ.ಸಿಯ ಪರವಾಗಿ ಸನ್ಮಾಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ ಜ್ಯೋತಿ ಪ್ರಭಾರ ‘ನನ್ನ ಕೊಡುಗೆ ದೊಡ್ಡದಲ್ಲ. ಆದರೆ ನನ್ನ ಪತಿ ಸೈನಿಕರಾಗಿದ್ದವರು ಅವರ ನೆನಪಿನಲ್ಲಿ ಶಾಲೆಗೆ ಎಲ್ಲರಿಗೂ ಅನುಕೂಲವಾಗುವಂತ ಕಾಣಿಕೆ ನೀಡುವ ಉದ್ದೇಶವಿತ್ತು. ಅದನ್ನು ಈ ರೀತಿಯಲ್ಲಿ ನೀಡಿದ್ದೇನೆ. ಎಲ್ಲರೂ ಪ್ರೀತಿಯಿಂದ ಸ್ವೀಕರಿಸಬೇಕಾಗಿ ಮನವಿ ಮಾಡುತ್ತೇನೆ ಎಂದರು”.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಾಘು ನಾಯ್ಕ, ಎಸ್.ಡಿ.ಎಂ.ಸಿಯ ಕಾರ್ಯಧ್ಯಕ್ಷರಾದ ಸುರೇಶ ನಾಯ್ಕ, ವಿಶ್ವೇಶ್ವರ ಭಟ್ ಹಳೆಮನೆ, ರಮೇಶ ನಾಯ್ಕ ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ನಾಗರಾಜ ಈಶ್ವರ ಹೆಗಡೆ ವಹಿಸಿದ್ದರು.್ಲ ನಾಗರಾಜ ಗಣಪತಿ ಹೆಗಡೆ, ಶಿಕ್ಷಕ ಸ್ವಾಗತಿಸಿದ್ದರು. ಡಾ.ಸುರೇಶ ತಾಂಡೇಲ್ ವಂದಿಸಿದರು.
Leave a Comment