ಹೊನ್ನಾವರ :
ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಯೋಗ ತರಬೇತಿ ಕಾರ್ಯವನ್ನು ಆಯೋಜಿಸಲಾಗಿತ್ತು.
ಪತಂಜಲಿ ಯೋಗ ಕೇಂದ್ರ ಹೊನ್ನಾವರ ಹಾಗೂ ನ್ಯೂ ಇಂಗ್ಲಿಷ್ ಸ್ಕೂಲ್ ಕ್ರೀಡಾ ಸಂಘದ ವತಿಯಿಂದ ಯೋಗ ಶಿಕ್ಷಕರಾದ ನಾಗೇಂದ್ರ ಭಟ್ಟ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ವಿವಿಧ ಯೋಗಾಸನಗಳು, ಸೂರ್ಯ ನಮಸ್ಕಾರ ಹಾಗೂ ವಿವಿಧ ಆರೋಗ್ಯದ ಗುಟ್ಟುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ಸ್ವಾಗತಿಸಿದರು. ಪತಂಜಲಿ ಕೇಂದ್ರದ ನಿರ್ದೇಶಕ ಜಿ.ಟಿ. ಹೆಬ್ಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಅಶೋಕ ನಾಯ್ಕ ವಂದಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿ ಪ್ರತಿಭಾ ನಾಯ್ಕ, ದೈಹಿಕ ಶಿಕ್ಷಕರಾದ ಯಶ್ವಂತ ಮೇಸ್ತ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಒತ್ತಡ ನಿವಾರಿಸುವಲ್ಲಿ ಇದೊಂದು ಉತ್ತಮ ಪ್ರಯತ್ನವಾಗಿತ್ತು.
Leave a Comment