ಹಳಿಯಾಳ:
ರಾಜ್ಯ ಸರ್ಕಾರದಿಂದ ಹಳಿಯಾಳ-ಜೋಯಿಡಾ ಕ್ಷೇತ್ರ ಅಭಿವೃದ್ದಿಗೆ ಕೊಟ್ಯಂತರ ರೂ. ಅನುದಾನದ ಹೊಳೆಯೆ ಹರಿದು ಬರುತ್ತಿದ್ದು ಕ್ಷೇತ್ರದಲ್ಲಿ ಮತ್ತೇ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ ಮಂಜೂರಾಗಿದ್ದು ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.ಹಳಿಯಾಳ: ರಾಜ್ಯ ಸರ್ಕಾರದಿಂದ ಹಳಿಯಾಳ-ಜೋಯಿಡಾ ಕ್ಷೇತ್ರ ಅಭಿವೃದ್ದಿಗೆ ಕೊಟ್ಯಂತರ ರೂ. ಅನುದಾನದ ಹೊಳೆಯೆ ಹರಿದು ಬರುತ್ತಿದ್ದು ಕ್ಷೇತ್ರದಲ್ಲಿ ಮತ್ತೇ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ ಮಂಜೂರಾಗಿದ್ದು ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಕೆಲವು ದಿನಗಳ ಅವಧಿಯಲ್ಲಿ ಸರ್ಕಾರದಿಂದ ಮಂಜೂರಾದ ವಿವಿಧ ಅಭಿವೃದ್ದಿ ಕಾಮಗಾರಿಗಳ ಅಭಿವೃದ್ದಿ ಪಟ್ಟಿ, ಸರ್ಕಾರದ ಆದೇಶ ಪತ್ರ ಮಾಧ್ಯಮಕ್ಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ತಾಲೂಕಿನ ಕಾವಲವಾಡ ಮತ್ತು ಮುರ್ಕವಾಡ ಗ್ರಾಮಗಳಿಗೆ ಹಳ್ಳಿ ಸಂತೆ ತಲಾ 33.60ಲಕ್ಷರೂ, ಹಳಿಯಾಳ ಮತ್ತು ಜೋಯಿಡಾಗೆ – ಬಸವ ವಸತಿ ಯೋಜನೆಯಡಿ -1000 ಮನೆಗಳ ನಿರ್ಮಾಣ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 75.00 ಲಕ್ಷ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 55.00 ಲಕ್ಷ, ಆರ್.ವಿ.ದೇಶಪಾಂಡೆ ಅವರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 1ಕೋಟಿ, ವಿ.ಪ.ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 75 ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ –ಗೋವಿಂದರಾಜ್ ಅವರಿಂದ 10 ಲಕ್ಷರೂ, ಐವಾನ್ ಡಿ’ಸೋಜಾರಿಂದ 11 ಲಕ್ಷ ರೂ. ಅನುದಾನ ಮಂಜೂರಾಗಿದೆ. ಅಲ್ಪಸಂಖ್ಯಾತರ ಯೋಜನೆಯಡಿ 2ಕೋಟಿ, ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿಯಲ್ಲಿ ಜೋಯಿಡಾ ತಾಲೂಕಿನ ಮೂರು ಅತಿ ಮುಖ್ಯ ರಸ್ತೆಗಳ ಸುಧಾರಣೆ ಮತ್ತು ಸೇತುವೆ ನಿರ್ಮಾಣಕ್ಕೆ ಒಟ್ಟೂ 8.26 ಕೋಟಿರೂ, ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿರ್ವಹಣೆ ವೆಚ್ಚದಲ್ಲಿ ರೂ. 150 ಲಕ್ಷ ಅನುದಾನ, ಹಳಿಯಾಳ ಮತ್ತು ಜೋಯಿಡಾ ತಾಲೂಕಿಗೆ ಪಶುಭಾಗ್ಯ ಯೋಜನೆಯಡಿ ಹೆಚ್ಚುವರಿ ಅನುದಾನ 30 ಲಕ್ಷ, ಗುಡ್ನಾಪೂರ ಜಮೀನು – ಕಂದಾಯ ಇಲಾಖೆಗೆ ಹಸ್ತಾಂತರ, ಸಕ್ಕರೆ ಕಾರ್ಖಾನೆ ವತಿಯಿಂದ ರಸ್ತೆ ಕಾಮಗಾರಿಗಳಿಗಾಗಿ ರೂ.67 ಲಕ್ಷ, ಉತ್ತರ ಕನ್ನಡ ಜಿಲ್ಲೆಯ ಸಮುದಾಯ ಭವನಗಳ ನಿರ್ಮಾಣಕ್ಕೆ 535 ಲಕ್ಷ, ಜೋಯಿಡಾ ವಸತಿ ಕಾರ್ಯಾಗಾರ – ಕುಶಲಕರ್ಮಿಗಳಿಗೆ ವಿಶೇಷ ಯೋಜನೆಯಡಿಯಲ್ಲಿ 115 ಮನೆಗಳ ಮಂಜೂರು, ದಾಂಡೇಲಿಯಲ್ಲಿ ಅಂಬೇಡ್ಕರ ಭವನ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 100 ಲಕ್ಷ ಒಟ್ಟೂ 150 ಲಕ್ಷ ಅನುದಾನ. ಲೋಕೋಪಯೋಗಿ ಇಲಾಖೆಯಿಂದ ಪರಿಶಿಷ್ಟ ಪಂಗಡದವರಿಗೆ ರೂ.1 ಕೋಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಾಮಗಾರಿಗಳಿಗೆ ರೂ. 510 ಲಕ್ಷ, ರಾಮನಗರದಲ್ಲಿ ವಿವಿಧ ಸಮುದಾಯ ಭವನಗಳಾದ ಕ್ಷತ್ರೀಯ ಮರಾಠ ಸಮಾಜ – (ಸೀತಾವಾಡಾ), ಕುಣಬಿ ಸಮಾಜ – (ಅಡಾಳಿ), ಅಂಬೇಡ್ಕರ ಭವನ–(ಸೀತಾವಾಡಾ), ದನಗರ ಗೌಳಿ ಸಮುದಾಯ ಭವನ– (ಅಕ್ರಾಳಿ) ಗಳಿಗೆ ಜಮೀನು ಮಂಜೂರು ಹಾಗೂ ಅನುದಾನ ಮಂಜೂರಾಗಿದೆ ಎಂದು ಸಚಿವ ದೇಶಪಾಂಡೆ ತಿಳಿಸಿದರು.
Leave a Comment