ಹೊನ್ನಾವರ :
ತಾಲೂಕಿನ ಮಾವಿನಕುರ್ವಾ ಗ್ರಾಮ ದೇವಿ ಸನ್ನಿಧಿಯಲ್ಲಿ ಶ್ರೀ ದೇವಿಯ ಗರ್ಭ ಮಂದಿರ ನವೀಕರಣ, ಶಿಖರ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶ್ರೀ ದೇವರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಉತ್ಸವ ಮೂರ್ತಿಗೆ ರಜತ ಕವಚ, ಪ್ರಭಾವಳಿ ಛತ್ರ ಸಮರ್ಪಣೆ, ಪೂರ್ಣ ಕಲಾವೃದ್ಧಿ ಹವನ, ಮಂಗಲ ಚಂಡಿಕಾ ಯಾಗ, ಸಾಮೂಹಿಕ ಶ್ರೀದೇವಿ ಭೂ ದೇವಿ ಸಹಿತ ಸತ್ಯನಾರಾಯಣ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಪ್ತಶತಿ ಪಾರಾಯಣ, ಧನ್ವಂತರಿ ಹೋಮ, ಮಂಡಲ ದರ್ಶನ, ರಂಗ ಪೂಜಾ, ಪ್ರಾಕಾರ ಉತ್ಸವ, ರಾಜೋಪಚಾರ ಸೇವೆ ಇನ್ನಿತರ ಹವನಾಧಿ ಕಾರ್ಯಗಳು ನಡೆದವು. ದೇವರಿಗೆ ಅಭಿಷೇಕ, ಕುಂಕುಮಾರ್ಚನೆ, ಉಡಿ ಸೇವೆ, ಬಾಳಕೊನೆ ಪೂಜೆ ಸೇವೆ ಸಲ್ಲಿಸಿ ಸಾವಿರಾರು ಭಕ್ತರು ಅನ್ನ ಸಂತರ್ಪಣೆ ಪ್ರಸಾದ ಸ್ವೀಕರಿಸಿ ಪುನೀತರಾದರು. ವೇ.ಮೂ ಕಟ್ಟೆ ಶಂಕರ ಭಟ್ ಇವರ ಆಚಾರ್ಯತ್ವದಲ್ಲಿ ದೇವತಾ ಕಾರ್ಯಕ್ರಮಗಳು ನೆರವೇರಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸುನೀಲ ನಾಯ್ಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
Leave a Comment