ಹಳಿಯಾಳ:- :- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಆಸ್ತಿ ಹಾಗೂ ಜವಾಬ್ದಾರಿಗಳ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ. ದೇಶಪಾಂಡೆ ಹೆಸರಿನಲ್ಲಿ ಚರಾಸ್ಥಿ ಒಟ್ಟೂ 22,69,96,666ರಷ್ಟಿದ್ದು ಅವರ ಪತ್ನಿ ರಾಧಾ ಹೆಸರಿನಲ್ಲಿ 112,26,97,153 ರಷ್ಟಿದೆ. ಆರ್.ವಿಡಿ ಹೆಸರಿನಲ್ಲಿ ವಿವಿಧ ಬ್ಯಾಂಕಗಳಲ್ಲಿ 18,30,514ರೂ. ಠೇವಣಿ ಇದ್ದು ರಾಧಾ ಅವರ ಹೆಸರಿನಲ್ಲಿ 7ಕೋಟಿ 45ಲಕ್ಷ 76ಸಾವಿರ ರೂ. ಇದೆ. ದೇಶಪಾಂಡೆ ಅವರ ಕೈಯಲ್ಲಿ 3 ಲಕ್ಷ 56ಸಾವಿರ ನಗದು ಇದ್ದರೇ ಪತ್ನಿ ರಾಧಾ ಕೈಯಲ್ಲಿ 2ಲಕ್ಷ 69ಸಾವಿರ ರೂ. ಇದೆ. ದೇಶಪಾಂಡೆ ಹೆಸರಿನಲ್ಲಿ ಒಟ್ಟೂ 21ಕೋಟಿ 74 ಲಕ್ಷ 61 ಸಾವಿರ ರೂ ಬೆಲೆಯ ಭೂಮಿ ಇದ್ದರೇ ರಾಧಾ ಹೆಸರಿನಲ್ಲಿ 8,40,52,506ರೂ ಬೆಲೆಯ ಭೂಮಿ ಇದೆ. ದೇಶಪಾಂಡೆಗೆ ಒಟ್ಟೂ 6,01,124ರೂಗಳಷ್ಟು ಹೊಣೆಗಾರಿಕೆ ಇದ್ದರೇ ರಾಧಾ ಹೆಸರಿನಲ್ಲಿ 2,17,05,413ರೂಗಳಷ್ಟು ಹೊಣೆಗಾರಿಕೆ ಇದೆ. ವಿವಿಧ ಖಾಸಗಿ ಕಂಪೆನಿಗಳಲ್ಲಿ ರಾಧಾ ಅವರ ಹೆಸರಿನಲ್ಲಿ ಒಟ್ಟೂ 1ಕೋಟಿ 35ಲಕ್ಷ 20ಸಾವಿರ80 ಬೆಲೆಯ ಶೇರಗಳು ಇವೆ. ಇದರ ಹೊರತಾಗಿ ಇಬ್ಬರ ಹೆಸರಿನಲ್ಲಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ ಕೂಡ ಇವೆ ಎಂದು ಘೋಷಿಸಲಾಗಿದೆ.
Leave a Comment