ಹೊನ್ನಾವರ :ತಾಲೂಕಿನ ಹಡಿನಬಾಳ ಪಂಚಾಯತ್ ವ್ಯಾಪ್ತಿಯ ಮುಖ್ಯ ಅಂಚೆ ಕಛೇರಿ ಸ್ಥಳಾಂತರಿಸುವದನ್ನು ಸಾರ್ವಜನಿಕರು ವಿರೋಧಿದ್ದಾರೆ. ಇಲ್ಲಿನ ಹಡಿನಬಾಳ ಮುಖ್ಯ ಅಂಚೆ ಕಛೇರಿಯು ಕಳೆದ 20 ವರ್ಷಗಳಿಂದ ಮಂಜುನಾಥ ಶೇಟ್ ಇವರ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪಂಚಾಯತ್ ವ್ಯಾಪ್ತಿಗೆ ಬರುವ ಸುತ್ತ ಮುತ್ತಲಿನ ಊರಿನ ಜನರಿಗೆ ಬಹಳ ಅನುಕೂಲಕರವಾಗಿದೆ. ಆದರೆ ಅಂಚೆ ಕಛೇರಿಯನ್ನು ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಸ್ಥಳಾಂತರಿಸಲು ಉದ್ದೇಶಿಸಿರುವ ಗ್ರಾಮ ಪಂಚಾಯತ್ ಕಟ್ಟಡದ ಕೋಣೆಯು ಹೆಚ್ಚು ಅಭದ್ರತೆಯಿಂದ ಕೂಡಿದೆ. ಗ್ರಾಮ ಪಂಚಾಯತ್ ಕಟ್ಟಡದ ಕೃಷಿ ಉಪಕರಣಗಳನ್ನು ಇಡುವ ಒಂದು ಕೋಣೆಯಲ್ಲಿ ಅಂಚೆ ಕಛೇರಿಯನ್ನು ಸ್ಥಳಾಂತರಿಸಲು ಪ್ರಯತ್ನ ನಡೆಯುತ್ತಿದೆ. ಈ ಕುರಿತು ಈಗಾಗಲೇ ಸಂಸದರ ಕಛೇರಿಗೆ ಸಾರ್ವಜನಿಕ ದೂರು ಸಲ್ಲಿಸಿದ್ದಾರೆ. ಕಛೇರಿಯನ್ನು ಸ್ಥಳಾಂತರಿಸಬಾರದು ಎಂದು ಸಂಸದರ ಕಾರ್ಯದರ್ಶಿಯವರು ಸುಪರಿಡೆಂಡೆಂಟ್ ಆಫ್ ಪೋಸ್ಟ್ ಆಫೀಸ್ ಕಾರವಾರ ಇವರಿಗೆ ಪತ್ರವನ್ನು ಬರೆದಿದ್ದಾರೆ. ಅದನ್ನು ಕಡೆಗಣಿಸಿ ಕಛೇರಿಯನ್ನು ಸ್ಥಳಾಂತರಿಸುವುದಕ್ಕೆ ಪ್ರಯತ್ನ ನಡೆದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದೆ. ಈಗ ಇರುವ ಕಟ್ಟಡದಲ್ಲೆ ಅಂಚೆ ಕಛೇರಿಯನ್ನು ಮುಂದುವರೆಸುವಂತೆ ಸಾರ್ವಜನಿಕರು ಆಗ್ರಹಸಿದ್ದಾರೆ.
Leave a Comment