ಹಳಿಯಾಳ:- ಕುಸ್ತಿಯ ತವರು, ಘಟಾನುಘಟಿ ರಾಜಕಾರಣಿಗಳಿಂದ ರಾಜ್ಯ ರಾಜಕಾರಣದಲ್ಲಿ ಗುರುತಿಸಲ್ಪಟ್ಟಿರುವ ಹಳಿಯಾಳ ಕ್ಷೇತ್ರದ 2018ರ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಶುಕ್ರವಾರ ದಿ.27 ರಂದು ಯಾರು ನಾಮಪತ್ರ ಹಿಂಪಡೆಯದ ಕಾರಣ ಅಂತಿಮವಾಗಿ 9 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ, ಜೆಡಿಎಸ್ನಿಂದ ಕೆ.ಆರ್.ರಮೆಶ, ಸಿಪಿಐಎಮ್ ಪಕ್ಷದ ಅಭ್ಯರ್ಥಿ ಯಮುನಾ ಗಾಂವಕರ, ಇಂಡಿಯನ್ ನ್ಯೂ ಕಾಂಗ್ರೇಸ್ ಪಕ್ಷದಿಂದ ಜಹಾಂಗೀರಬಾಬಾ ಖಾನ್, ಎಮ್ಇಪಿ ಪಕ್ಷದ ಅಭ್ಯರ್ಥಿ ಬಡೇಸಾಬ ಕಕ್ಕೇರಿ, ಶಿವಸೇನೆಯಿಂದ ಶಂಕರ ಫಾಕ್ರಿ, ಪಕ್ಷೇತರ ಅಭ್ಯರ್ಥಿಗಳಾಗಿ ಟಿ.ಆರ್.ಚಂದ್ರಶೇಖರ ಹಾಗೂ ಇಲಿಯಾಸ ಕಾಟಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾದ ಟಿ.ಆರ್.ಚಂದ್ರಶೇಖರ ಅವರಿಗೆ ಟ್ರಾಕ್ಟರ್ ಚಾಲಿತ ರೈತ ಚಿಹ್ನೆ ಹಾಗೂ ಇಲಿಯಾಸ ಕಾಟಿಗೆ ಆಟೋರೀಕ್ಷಾ ಚಿಹ್ನೆ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಭಜಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ 76 ವಿಧಾನ ಸಭಾ ಕ್ಷೇತ್ರ ವೀಕ್ಷಕ(ಒಬಸರ್ವರ) ಕೆಬಿ ಉಮಾಪತಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.








Leave a Comment