ಹಳಿಯಾಳ :
ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 52 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಶಾಲೆ 96.15%ರಷ್ಟು ಉತ್ತಮ ಫಲಿತಾಂಶ ದಾಖಲಿಸಿದ್ದು ವಿದ್ಯಾರ್ಥಿನೀಯರೇ ಮೆಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗದಲ್ಲಿ 95.15% ಫಲಿತಾಂಶ ಬಂದಿದ್ದು ಪೂಜಾ ಕೆ ಮುರ್ಕಾಟಿ 88.50% (531ಅಂಕ) ಪ್ರಥಮ, ವೈಷ್ಣವಿ ಬಿ ಅರಸಿನಗೇರಿ 87.66%(526) ದ್ವಿತೀಯ ಹಾಗೂ ಜ್ಯೋತಿ ಎನ್ ಘೇವಡಿ 87.16%(523) ತೃತಿಯ ಸ್ಥಾನ ಪಡೆದಿದ್ದಾರೆ
ವಾಣಿಜ್ಯ ವಿಭಾಗದಲ್ಲಿ 100%ರಷ್ಟು ಫಲಿತಾಂಶ ದಾಖಲಿಸಿರುವ ಶಾಲೆ ಪೂಜಾ ಎಮ್ ಕದಂ 81.83%(491) ಪ್ರಥಮ, ಶೃತಿ ಎ ಗೌಡಾ 81.50% (489) ದ್ವಿತೀಯ ಹಾಗೂ ಅಂಜನಾ ಬಿ ಜನಗೇಕರ 79.83%(479) ತೃತಿಯ ಸ್ಥಾನ ಗಳಿಸಿದ್ದು ಅವರ ಸಾಧನೆಗೆ ಶಾಲಾ ಸುಧಾರಣಾ ಸಮೀತಿ, ಪಾಲಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.





Leave a Comment