ಹೊನ್ನಾವರ .ಕರ್ನಾಟಕ ಕ್ರಾಂತಿರಂಗದ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಎರಡನೇ ವರ್ಷದ ನಾಡಹಬ್ಬ ಪಟ್ಟಣದ ನ್ಯೂಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು.
ದಂಡಿನದುರ್ಗಾ ದೇವಸ್ದಾನದಿಂದ ಹೊರಟ ಭವ್ಯ ಮೆರವಣೆಗೆ ಜೊತೆ ಬೈಕ್ ರ್ಯಾಲಿ ಕಾಲೇಜು ಸರ್ಕಲ್ ವರೆಗೆ ಬಂದು ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದವರೆಗೆ ಸಂಚಾರ ನಡೆಸಿತು.
ಕರ್ನಾಟಕ ಕ್ರಾಂತಿರಂಗದ ರಾಜ್ಯಾಧ್ಯಕ್ಷ ಮಂಚೇಗೌಡ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ “ಕ್ರಾಂತಿರಂಗ ಇದು ಯಾವುದೇ ರಾಜಕೀಯ ಪ್ರೇರಿತ ಸಂಘಟನೆಯಲ್ಲ. 2 ವರ್ಷದ ವಾರ್ಷಿಕೊತ್ಸವ ಆಚರಣೆ ಮಾಡುತ್ತಿರುವ ನೀವು ಮುಂದಿನ ವರ್ಷದ ಒಳಗೆ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಬಲಪಡಿಸಿ” ಎಂದು ಸಲಹೆ ನೀಡಿ ಶುಭ ಹಾರೈಸಿದರು.
ಸೇಫಸ್ಟಾರ್ ಗ್ರೂಪ್ ಮ್ಯಾನೇಜಿಂಗ್ ಡೈರಕ್ಟರ್ ಆದ ಜಿ.ಜಿ.ಶಂಕರ ಮಾತನಾಡಿ ಕ್ರಾಂತಿರಂಗ ಕಳೆದ 2 ವರ್ಷದಿಂದ ತಾಲೂಕಿನಾದ್ಯಂತ ಅನೇಕ ಜನೋಪಯೋಗಿ ಕೆಲಸ ಮಾಡುತ್ತಾ ಬಂದಿದೆ. ಕನ್ನಡ ಭಾಷೆಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸಂಘಟನೆಯಲ್ಲಿ ಇದು ಒಂದಾಗಿದೆ ಮುಂದಿನ ದಿನದಲ್ಲಿ ಹೊನ್ನಾವರದ ರಾಷ್ಟೀಕೃತ ಬ್ಯಾಂಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹೆಚ್ಚಿನ ಸಂಖ್ಯೆಯವರು ಉತ್ತರ ಭಾರತದವರು ಅವರಿಗೆ ಕನ್ನಡ ಭಾಷೆ ಬರದೇ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ವವ್ಯಹಾರಕ್ಕೆಂದು ಆಗಮಿಸುವ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಹಲವು ಬಾರಿ ಮನವಿ ನೀಡಿದರು ಸಮಸ್ಯೆಯಾಗಿಯೇ ಉಳಿದಿದೆ, ಮುಂದಿನ ದಿನದಲ್ಲಿ ಕ್ರಾಂತಿರಂಗ ಈ ಬಗ್ಗೆ ಗಮನ ಹರಿಸಿದರೆ ನಾವೆಲ್ಲರು ನಿಮ್ಮೊಂದಿಗೆ ಕೈ ಜೋಡಿಸಲಿದ್ದೆವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ರಾಂತಿರಂಗ ವೇದಿಕೆ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ಮಾತನಾಡಿ “ಈ ದಿನದ ಕಾರ್ಯಕ್ರಮದಲ್ಲಿ ನೀವು ನೀಡಿದ ಎಲ್ಲಾ ಸಲಹೆಯನ್ನು ಮುಂದಿನ ವಾರ್ಷಿಕೊತ್ಸವದೊಳಗೆ ಸಮಸ್ಯೆ ಬಗೆಹರಿಸಿಯೇ ಆಚರಿಸುತ್ತೇವೆ ಎಂದು ಅತಿತಿಗಳಿಗೆ ಭರವಸೆ ನೀಡಿದರು.
ವೇದಿಕೆಯಲ್ಲಿ ಎಚ್.ಸಿ ಪ್ರಭುಲಿಂಗ, ಎ.ಬಿ.ಕುಮಾರ, ಡಿ.ಎಂ.ರೇವಣ್ಣ, ಹರೀಶಕುಮಾರ, ಬಸವರಾಜ ಹಾವೇರಿ. ನಾಗರಾಜ ನಾಯ್ಕ, ಶಿವರಾಜ ಮೇಸ್ತ, ಜಿ.ಎನ್.ಗೌಡ, ಎಸ್.ಡಿ.ಹೆಗಡೆ,ಸರೋಜಾ ನಾಯ್ಕ, ಅನಿತಾ ಪಾಲೇಕರ, ಉಪಸ್ದಿತರಿದ್ದರ.
ಮನೋರಂಜನಾ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಶ ಹಾಗೂ ಎಸ್.ಎಸ್.ಡಾನ್ಸ ಅಕಾಡೆಮಿ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
s
Leave a Comment