ಹಳಿಯಾಳ: ಮನುಷ್ಯನ ದೇಹದಲ್ಲಿನ ಎಲ್ಲ ರೀತಿಯ ರೋಗಗಳಿಗೆ ಉತ್ತಮ ಪರಿಹಾರ ಎಂದು ಪದೇ ಪದೇ ಸಾಬಿತಾಗುತ್ತಿರುವ ಆರೋಗ್ಯ ರಕ್ಷಾ ಕವಚವಾದ ಯೋಗಾಭ್ಯಾಸವನ್ನು ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡರೇ ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ರೋಗ ನಿವಾರಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಆದ್ದರಿಂದ ಎಲ್ಲರೂ ಯೋಗಾಭ್ಯಾಸದತ್ತ ಗಮನಹರಿಸುವಂತೆ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತಿ ಹಾಗೂ ಪುರಸಭೆ, ಮತ್ತು ಹಳಿಯಾಳದ ಪಂತಜಲಿ ಯೋಗ ಸಮಿತಿಯ ಜಂಟಿ ಸಹಯೋಗದಲ್ಲಿ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ನಡೆದ ವಿಶ್ವ ಯೋಗ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಹಿರಿಯ ವೈದ್ಯ ಡಾ.ಬಿ.ಬಿ ಮೂಡಬಾಗಿಲ ಮಾತನಾಡಿ ಭಾರತ ದೇಶದ ಪ್ರಾಚೀನ ವಿಜ್ಞಾನವಾದ ಸರ್ವರೋಗ ನಿವಾರಕ ಎಂದು ದೃಢಪಟ್ಟಿರುವ ಯೋಗಾಭ್ಯಾಸ ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡರೇ ಉತ್ತಮ ಆರೋಗ್ಯ ಹೊಂದಬಹುದೆಂದು ಅಭಿಪ್ರಾಯಪಟ್ಟರು. ಪತಂಜಲಿ ಯೋಗ ಸಮೀತಿಯ ಕಮಲ ಸಿಕ್ವೇರಾ, ಯೋಗಗುರು ಆಯ್ಎನ್ ಕಾಜಗಾರ, ಹಿರಿಯ ನಾಗರಿಕರ ಸಮೀತಿ ಡಿಎಮ್ ಸಾವಂತ,ಡಾ.ಸಿಎಸ್ ಓಶಿಮಠ, ಡಾ.ಜಿಡಿ ಗಂಗಾಧರ, ಉಪ ತಹಶೀಲ್ದಾರ್ ಅನಂತ ಚಿಪ್ಪಲಕಟ್ಟಿ, ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಡಾ|| ಪದ್ಮಕ್ಕ, ಪುರಸಭೆ ಅಧ್ಯಕ್ಷ ಶಂಕರ ಕಾಜಗಾರ, ಇಲಾಖೆಗಳ ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಕಾರ್ಯಕರ್ತರು, ಜನಪ್ರತಿನಿಧಿಗಳು ಇದ್ದರು.
Leave a Comment