ಹೊನ್ನಾವರ : “ಟಿವಿ, ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಬರವಣಿಗೆಯ ಕೌಶಲ್ಯ ಕಡಿಮೆಯಾಗುವುದನ್ನು ತಡೆಯಲು ಧ್ಯಾನ, ಯೋಗ, ಪ್ರಾಣಾಯಾಮ ಸಹಕಾರಿ” ಎಂದು ಹೊನ್ನಾವರದ ವೈದ್ಯಾಧಿಕಾರಿ ಡಾ| ಚೈತ್ರಾ ಪಂಡಿತ್ ನುಡಿದರು.
ಅವರು ಇತ್ತೀಚೆಗೆ ಸಂಗಮ ಸೇವಾ ಹೊನ್ನಾವರ ಹಾಗೂ ಕೆ.ಎಲ್.ಇ. ಸೊಸೈಟಿಯ ಕೌಟುಂಬಿಕ ಸಲಹಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹಳದೀಪುರದ ಆರ್.ಈ.ಎಸ್. ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಏರ್ಪಡಿಸಲಾದ ವಿಶ್ವಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
“ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ” ಎಂದು ಸಹ ಅವರು ನುಡಿದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅರುಣ ನಾಯ್ಕ ಸ್ವಾಗತಿಸಿದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಎ.ಎಸ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕ ಮಹೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕೌಟುಂಬಿಕ ಸಲಹೆಗಾರ ತಿಮ್ಮಣ್ಣ ಭಟ್ ಬಿ. ವಂದಿಸಿದರು.
ಸಂಗಮ ಸೇವಾ ಸಂಸ್ಥೆಯ ಖಜಾಂಚಿ ಭಾಸ್ಕರ ನಾಯ್ಕ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಶಾಲಾ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Leave a Comment