ಹಳಿಯಾಳ:- ತಾಲ್ಲೂಕಿನ ರೈತರು ಬೆಳೆದ ಬೆಳೆ, ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರತಿಬಿಂಬಿಸಿ ಅಂತಹ ಚಟುವತಿಕೆಗಳಿಗೆ ಸೂಕ್ತ ಪ್ರೋತ್ಸಾಹ ನೀಡಲು ಕೃಷಿ ಇಲಾಖೆಯವರು2018-19 ನೇ ಸಾಲಿನ ಆತ್ಮಯೋಜನೆ ಅಡಿ ಹಳಿಯಾಳ ತಾಲೂಕಾ ಮಟ್ಟದ “ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಪ್ರಶಸ್ತಿಗೆ ತಾಲೂಕಿನ ಒಟ್ಟು 5ರೈತರನ್ನು ಆಯ್ಕೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ನಾಗೇಶ ನಾಯ್ಕ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಆಯ್ಕೆಯಾದ ಐವರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಗೆ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ, ಸಮಗ್ರ ನೀರು ನಿರ್ವಹಣೆ, ಸಾವಯುವ ಕೃಷಿ ಅಭಿವೃದ್ಧಿ, ಯಂತ್ರೋಪಕರಣ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ತಂತ್ರಜ್ಞಾನ ಅಳವಡಿಕೆ (ಹಸಿರುಮನೆ, ಕಸಿ ಅಭಿವೃದ್ಧಿ, ಸಸ್ಯಕಾಶಿ ಇತ್ಯಾದಿ), ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ, ಸಾಕಾಣಿಕೆ, ಇತ್ಯಾದಿ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ರೈತರು ಅರ್ಜಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ. ಇವುಗಳಲ್ಲಿ ಯಾವೂದಾದರು ಒಂದು ಚಟುವಟಿಕೆಗೆ ಮಾತ್ರ ವಿಶೇಷ ಸಾಧನೆಗಳ ಕುರಿತು ಸೂಕ್ತ ದಾಖಲಾತಿ ಮತ್ತು ಕ್ಷೇತ್ರದ ಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕೈಗೊಂಡ ಚಟುವಟಿಕೆ-ತಾಂತ್ರಿಕತೆಯು ಪ್ರಸ್ತುತ ಸನ್ನಿವೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಪ್ರೇರಣೆ ಮತ್ತು ಅಳವಡಿಕೆಗೆ ಸಹಕಾರಿಯಾಗುವಂತಿರಬೇಕು. ಈಗಾಗಲೇ ಈ ಸಾಧನೆಗೆ ಪುರಸೃತರಾದವರು ಅಂದರೆ ಇದೇ ತರನಾದ/ಸವiನಾಂತರವಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ. ಆಸಕ್ತ ರೈತರು ದಿನಾಂಕ 31.07.2018ರ ಒಳಗೆ ಪಹಣಿ ಪತ್ರ, ಆಧಾರ್Àಕಾರ್ಡ, ರಾಷ್ಠ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ಹಾಗೂ ಎರಡು ಭಾವ ಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಖುದ್ದಾಗಿ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ ಪಡೆದು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದು ಹೆಚ್ಚಿನ ಮಾಹಿತಿಗೆ ದೂ. ಸಂಖ್ಯೆ 9483098153 ಸಂಪರ್ಕಿಸುವಂತೆ ಕೋರಲಾಗಿದೆ.
Leave a Comment