ಹೊನ್ನಾವರ: ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ ರವರು ಕಲಿ-ಕಲಿಸು ಯೋಜನೆಯಡಿ ಯೋಜಿಸಿದ ಶಾಲೆಗಳೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಾಕ್ಷಿ ಶಿಕ್ಷಕ ಬಳಗದ ಪಾಲ್ಗೊಳ್ಳುವಿಕೆಯ ಮೂಲಕ ಕಾರ್ಯಕ್ರಮವು ಯಶಸ್ವಿಯಾಯಿತು.
ಐ ಎಫ್ ಎ ಕಲಾ ಶಿಕ್ಷಣ ವಿಭಾಗದ ನಿರ್ದೇಶಕರಾದ ಕೃಷ್ಣಮೂರ್ತಿ ಟಿ.ಎನ್ ಸಂವಾದವನ್ನು ಉದ್ಘಾಟಿಸಿ ಮಾತನಾಡಿ ಸ್ಥಳೀಯ ಜಾನಪದ ಕಲೆಯನ್ನು ಒಳಗೊಂಡಂತೆ ವಿವಿಧ ಕಲಾ ಪ್ರಕಾರಗಳನ್ನು ಸಹಜವೂ ಸಂತಸದಾಯಕವೂ ಆದ ಕಲಿಕೆ ಆಗುವಂತೆ ಮಾಡಲು ಬಳಸಬಹುದಾಗಿದೆ ಎನ್ನುತ್ತ ರಾಜ್ಯಾದ್ಯಂತ ನಡೆದ ವಿಭಿನ್ನ ಪ್ರಯೋಗಗಳ ಕಡೆ ಗಮನ ಸೆಳೆದರು. ಸಂಘÀಟನೆಯಿಂದ ಶಿಕ್ಷಕರಿಗೆ ಸಿಗುವ ಬೆಂಬಲದ ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿಮಾತನಾಡಿ ತಾಲೂಕಿನಲ್ಲಿ ಇಂತಹ ಚಟುವಟಿಕೆ ಹಮ್ಮಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಎಲ್ಲ ಪ್ರಯತ್ನಗಳು ಮಕ್ಕಳು ಬಾಲ್ಯವನ್ನು ಕಲಿಕೆಯ ಒತ್ತಡದಲ್ಲಿ ಕಳೆದುಕೊಳ್ಳದೆ, ಸಂತಸ ಅನುಭವಿಸುವಂತೆ ಮಾಡಲು ಅಗತ್ಯವಾಗಿದೆ ಎಂದರು.
ಸಮನ್ವಯಾಧಿಕಾರಿ ಜಿ.ಎಸ್.ನಾಯ್ಕ, ಅಕ್ಷರದಾಸೋಹ ತಾಲೂಕು ಅಧಿಕಾರಿ ಸುರೇಶ ನಾಯ್ಕ ವೇದಿಕೆಯಲ್ಲಿದ್ದು ಮಾತನಾಡಿದರು.
ಮೂರು ದಿನಗಳ ಕಾಲ ತಾಲೂಕಿನ 10 ಶಾಲೆಗಳಿಗೆ ಐ.ಎಫ್.ಎ ಸಂಪನ್ಮೂಲ ವ್ಯಕ್ತಿಗಳ ತಂಡವು ಭೇಟಿ ನೀಡಿ ಶಿಕ್ಷಕರೊಂದಿಗೆ ಕಲಾ ಅ ಅಂತರ್ಗತ ಕಲಿಕೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿದರು. ಸ್ಥಳಿಯ ಕಲೆ, ಕಲಾವಿದರು, ಸಮುದಾಯಗಳನ್ನು ಕಲಿಕೆಯ ಚಟುವಟಿಕೆಗಳೊಂದಿಗೆ ಜೋಡಿಸುವ ಮೂಲಕ ಸಂತಸದಾಯಕ ಕಲಿಕೆಯ ವಾತಾವರಣ ನಿರ್ಮಾಣ ಮಾಡುವ ಆಶಯದ ಜನಪದ ಹಾಡುಗಳು, ಪಪೆಟ್ ಶೋ, ಕೋಲಾಟ,ಚಿತ್ರಕಲೆಯಲ್ಲಿ ಗಣಿತ, ಆಟದಲ್ಲಿ ಕಲಿಕೆಯ ಚಟುವಟಿಕೆಗಳು ಮುಂತಾದವುಗಳ ಮೂಲಕ ಅನುಭವಯುಕ್ತ ಕಲಿಕೆಯ ವಿಭಿನ್ನ ಸಾಧ್ಯತೆಗಳನ್ನು ಪರಿಚಯಿಸಿದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ಹಾಗೂ ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳಾದ ಮೋಹನಕುಮಾರ, ಚೆನ್ನಕೇಶವ ಕಾಫಿ, ಅರುಣ ಬಿ.ಟಿ, ಸದಾನಂದ ಬೈಂದೂರು, ನಾಗರಾಜ ಹುಡೇದ, ಗಂಗಪ್ಪ ಎಲ್, ಸಿದ್ದಪ್ಪ ಬಿರಾದಾರ ಶಾಲೆಗಳೊಂದಿಗೆ ಸಂವಾದದಲ್ಲಿ ತೊಡಗಿಕೊಂಡರು. ಶಿಕ್ಷಕ ಸಂಘದ ಎಮ್.ಜಿ.ನಾಯ್ಕ ಬಿ.ಆರ್.ಪಿಗಳು,ಸಿ.ಆರ್.ಪಿಗಳು,ಬಿ.ಐ.ಇ.ಆರ್.ಟಿಗಳು ಹಾಗೂ ಸಾಕ್ಷಿ ಬಳಗದ ಶಿಕ್ಷಕರು ಸಂವಾದದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಸಂಘಟಕ ವೆಂಕಟೇಶ ನಾಯ್ಕ,ಶಿಕ್ಷಕರು ಕೊಪ್ಪದಮಕ್ಕಿ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ನಿರ್ವಹಿಸಿದರೆ ಸಾಕ್ಷಿ ಸಂಚಾಲಕ ಶಿಕ್ಷಕ ಜನಾರ್ದನ ನಾಯ್ಕ ವಂದಿಸಿದರು.
Leave a Comment