ಹೊನ್ನಾವರ : ಪರೇಶ ಮೇಸ್ತ ಕುಟುಂಬಕ್ಕೆ ರಾಜ್ಯ ಸರಕಾರದ ಪರಿಹಾರ ತಾರತಮ್ಯ, ಕೊಟ್ಟ ಮಾತಿನಂತೆ ಅವನ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡದಿರುವುದು ಹಾಗೂ ಶನೈಶ್ಚರ ದೇವಸ್ಥಾನದ ಎದುರಿನ ಸ್ಥಳದ ಮಾಲಿಕತ್ವ ಕುರಿತು ಇನ್ನೂ ಪೋಡಿ ಮಾಡಿ ಬಗೆಹರಿಸದಿರುವ ಕ್ರಮವನ್ನು ವಿರೋಧಿಸಿ ಹಿಂದು ಧರ್ಮ ರಕ್ಷಣಾ ವೇದಿಕೆ ವತಿಯಿಂದ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಶಾಂತಯುತ ಮೆರವಣಿಗೆ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ವಿಶ್ವನಾಥ ನಾಯಕ ತಿಳಿಸಿದರು. ಪಟ್ಟಣದ ದುರ್ಗಾಕೇರಿಯ ದಂಡಿನದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದುರ್ಗಾಕೇರಿಯ ದಂಡಿನದುರ್ಗಾ ದೇವಸ್ಥಾನದಿಂದ ತಹಸೀಲ್ದಾರರ ಕಚೇರಿ ವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಚುನಾವಣೆ ದೃಷ್ಠಿಯಿಂದ ಹೋರಾಟ ಸ್ಥಗಿತಿಗೊಂಡಿತ್ತು. ಘಟನೆ ನಡೆದಾಗ ಅಸ್ಥಿತ್ವದಲ್ಲಿದ್ದ ಸರಕಾರವೇ ಈಗ ಸಮ್ಮಿಶ್ರ ಸರಕಾರದ ಪ್ರಧಾನ ಭಾಗವಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿದ್ದೇವೆ ಎಂದು ಮೊದಲು ಹೇಳಿದ್ದರೂ 2 ತಿಂಗಳ ವಿಳಂಬ ಮಾಡಿ ಹಸ್ತಾಂತರ ಮಾಡಿದ್ದಾರೆ. ಈಗ ಆಡಳಿತಾರೂಢ ಪಕ್ಷದ ಕಾರ್ಯಕರ್ತರೇ ಉಪವಾಸ ಸತ್ಯಾಗ್ರಹ ನಡೆಸಿರುವುದು ವಿಪರ್ಯಾಸ ಎಂದರು.ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ ಕಳ್ಳನನ್ನು ಹಿಡಿಯಿರಿ ಎಂದು ಕಳ್ಳನೇ ಕಳ್ಳನೊಟ್ಟಿಗೆ ಓಡುತ್ತಿರುವ ಕಥೆಯಂತಿದೆ. 7 ತಿಂಗಳ ಕಳೆದ ಮೇಲೆ ಇವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮರಣೋತ್ತರ ಪರೀಕ್ಷೆ ಇವತ್ತಿನವರೆಗೂ ಬರಲಿಲ್ಲ. ಪರೇಶ ಮೇಸ್ತನ ಸಾವಿನ ನಂತರ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ತಾರತಮ್ಯ ಮಾಡಿದೆ. ಆಶ್ವಾಸನೆ ಈಗಲೂ ಕೊಡುತ್ತಿದ್ದಾರೆ. ಪರೇಶ ಮೇಸ್ತನ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಜಿಲ್ಲಾಧಿಕಾರಿ ಎಲ್ಲರ ಮುಂದೆ ಹೇಳಿದ್ದರು. ಆದರೆ ಕೊಟ್ಟಿಲ್ಲ ಘಟನೆ ನಡೆಯಲು ಆಂತರಿಕಕಾರಣವಾದ ಸ್ಥಳವನ್ನು ಪೋಡಿ ಮಾಡಿಕೊಡುತ್ತೇವೆ ಎಂದು ಎಸಿಯವರು ಹೇಳಿದ್ದರು. ಆದರೆ ಈತನ ಮಾಡಿಲ್ಲ ಎಂದು ಆಪಾದಿಸಿದರು.ಸುದ್ದಿಗೋಷ್ಠಿಯಲ್ಲಿ ಜೆ.ಟಿ.ಪೈ, ಸೂರ್ಯಕಾಂತ ಸಾರಂಗ, ಮಂಜುನಾಥ ಶೇಟ್, ಹನುಮಂತ ತಾಂಡೇಲ, ವಿಮಲ ರೇವಣಕರ, ರಘು ಪೈ ಮತ್ತಿತರರು ಉಪಸ್ಥಿತರಿದ್ದರು.
Leave a Comment