ಹಳಿಯಾಳ:- ದಿ ಅರ್ಬನ್ ಯುಥ್ ಕ್ಲಬ್, ಹಳಿಯಾಳ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಆಗಸ್ಟ್ ದಿ.5 ರಂದು “ ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್ “ ಪಂದ್ಯಾವಳಿಯನ್ನು ಹಳಿಯಾಳದ ಕ್ರೀಡಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ನ ಅಧ್ಯಕ್ಷ ಶ್ರೀಪತಿ ಭಟ್ ತಿಳಿಸಿದ್ದಾರೆ. ಪಂದ್ಯಾವಳಿಯು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ದಿ.5 ರವಿವಾರ ನಡೆಯಲಿದೆ. ಈ ಪಂದ್ಯಾವಳಿಯು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರುಗಳನ್ನು ಕ್ಲಬ್ನ ಉದಯ ಜಾಧವ (9741574840), ಅನಿಲ ಲಾಡ (9731770530) ಹಾಗೂ ಮಹಾಂತೇಶ ಓಶಿಮಠ(9448291735) ಅವರಲ್ಲಿ ನೋಂದಾಯಿಸಿಕೊಳ್ಳುವಂತೆ ಶ್ರೀಪತಿ ಭಟ್ ವಿನಂತಿಸಿದ್ದಾರೆ.
Leave a Comment