ಹಳಿಯಾಳ:- ಪುರಸಭೆಯ ಆಡಳಿತ ಮಂಡಳಿಯ ಕೊನೆಯ ಅವದಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ 7ರ ಸದಸ್ಯೆ ಮಾದವಿ ಬಸವರಾಜ ಬೆಳಗಾಂವಕರ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ನಿಲಜಕರ ಅವರ ಆಡಳಿತಾವದಿಯ ಮುಗಿದ ಹಿನ್ನಲೆಯಲ್ಲಿ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೊಬಾಟೆ, ಪ್ರತಿಪಕ್ಷ ನಾಯಕ ಶ್ರೀಕಾಂತ ಹೂಲಿ, ಮುಖ್ಯಾಧಿಕಾರಿ ಕೇಶವ ಚೌಗುಲೆ ಇದ್ದರು.
Leave a Comment