ಹೊನ್ನಾವರ: ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ (66) ಬುಧವಾರ ತಮ್ಮ ಸ್ವಗೃಹ ನಗರಬಸ್ತಿಕೇರಿ ಹೂಜಿಮಕ್ಕಿಯಲ್ಲಿ ಮರಣಪಟ್ಟರು.
ಮೃತರು ಪತ್ನಿ ಕನ್ಯಾಕುಮಾರಿ, ಪುತ್ರರಾದ ಹರ್ಷ, ಸಂತೋಷ ಮತ್ತು ವಿನೋದ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಬುಧವಾರ ಸಾಯಮಕಾಲ ತೋಟಕ್ಕೆ ಹೋದವರು ಮನೆ ಎದುರಿನ ಕಾಲು ಸುಂಕವನ್ನು ದಾಟುವಾಗ ಕಾಲು ಜಾರಿ ತಲೆಗೆ ಪೆಟ್ಟು ಬಿದ್ದು ಮೃತರಾದರು. ಅಸಹಜ ಸಾವು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ವಕೀಲರ ಸಂಘ ಶೃದ್ಧಾಂಜಲಿ ಸಭೆ ನಡೆಸಿತು.
ಹಿರಿಯ ಸಿವಿಲ್ ನ್ಯಾಯಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ, ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಮಧುಕರ ಪಿ. ಭಾಗ್ವತ, ಹೆಚ್ಚುವರಿ ನ್ಯಾಯಾಧೀಶೆ ಸನ್ಮತಿ ಎಸ್.ಆರ್., ವಕೀಲರ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಹಿರಿಯ ವಕೀಲರಾದ ವಿ.ಎಂ. ಭಂಡಾರಿ, ಆರ್.ಎಸ್. ಕಾಮತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Leave a Comment