ಹಳಿಯಾಳ:- ಹಳಿಯಾಳದ ಕ್ರೀಡಾ ಭವನದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿಯಲ್ಲಿ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು ವಿಜೇತರಾಗಿ ಪ್ರಶಸ್ತಿಗೆ ಭಾಜನರಾದರು. ಹಳಿಯಾಳದ ದಿ.ಅರ್ಬನ್ ಯುಥ್ ಕ್ಲಬ್ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಹಳಿಯಾಳದ ಕ್ರೀಡಾಭವನದಲ್ಲಿ ನಡೆದ “ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್“ ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ದಾಂಡೇಲಿ, ಕಾರವಾರದ ಕೈಗಾ ಹಾಗೂ ಹಳಿಯಾಳದ ಒಟ್ಟೂ 77 ಸ್ಪರ್ದಿಗಳು ಭಾಗವಹಿಸಿದ್ದರು. ರಾಷ್ಟ್ರೀಯ ಆಟಗಾರರು ಪಾಲ್ಗೊಂಡಿದ್ದ ಪಂದ್ಯಾವಳಿಯಲ್ಲಿ 126 ಪಂದ್ಯಗಳು ನಡೆದವು. ಪಂದ್ಯಾವಳಿಯ ನೌಕ್ ಔಟ್ ವಿಭಾಗದಲ್ಲಿ ಮೊದಲ ಮೂರು ಪ್ರಶಸ್ತಿಗಳನ್ನು ಕ್ಲಬ್ನ ಅಶಿತ್ ಜೈನ್, ಇಪ್ರಾಹಿಂ ರಸಪುಡಿ ಹಾಗೂ ರವಿ ಡಿ ಹಾಗೂ ಹುಬ್ಬಳ್ಳಿಯ ಮಹೇಶ ಪಡೆದರು. ಲೀಗ್ ವಿಭಾಗದ ಮೂರು ಪ್ರಶಸ್ತಿಗಳನ್ನು ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳದ ಚೇತನ ಅರಳಿಕಟ್ಟಿ, ಹಳಿಯಾಳ ಕ್ಲಬನ ಚಿನ್ಮಯ ಓಶಿಮಠ, ಮಂಗಳೂರಿನ ಎಮ್ಟಿಟಿಎ ಕ್ಲಬ್ನ ರಜತ ಲಾಡ ಹಾಗೂ ಧಾರವಾಡದ ಕಾಸ್ಮಸ್ ಕ್ಲಬನ ಎಮ್.ಎಮ್.ನಿಂಗನಗೌಡ ತಮ್ಮದಾಗಿಸಿಕೊಂಡರು. ಈ ಸಂದರ್ಭದಲ್ಲಿ ಪ್ಯಾರಾ ಒಲಂಪಿಕ್ ಟೆಬಲ್ ಟೆನಿಸ್ ಆಟಗಾರ ನಾಝೀಮ್ ಖಾನ್ರನ್ನು ಹಳಿಯಾಳದ ದಿ.ಅರ್ಬನ್ ಯುಥ್ ಕ್ಲಬ್ನಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಶ್ರೀಪತಿ ಭಟ್, ಉದಯ ಜಾಧವ, ಅನಿಲ ಲಾಡ, ಮಹಾಂತೇಶ ಓಶಿಮಠ, ಉದಯ ಹೂಲಿ, ವಿಲಾಸ ಯಡವಿ, ಸೂರ್ಯವಂಶಿ ಇದ್ದರು.
Leave a Comment