ಹಳಿಯಾಳ : ತಾಲೂಕಿನಲ್ಲಿರುವ ವಿವಿಧ ಹಾಸ್ಟೇಲ್ ಮತ್ತು ಆಶ್ರಮ ಶಾಲೆಗಳಿಗೆ ಹಳಿಯಾಳ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಶಿಲ್ಪಾ ಎಚ್.ಎ. ಮತ್ತು ಕಿರಿಯ ನ್ಯಾಯಾಧೀಶ ಬಸವರಾಜ ಸನದಿ ಅವರು ಕಾನೂನು ಸೇವಾ ಸಮಿತಿಯ ಸದಸ್ಯೆ ನ್ಯಾಯವಾದಿ ಸುರೇಖಾ ಗುನಗಾ ಅವರೊಂದಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ತೇರಗಾಂವ ಗ್ರಾಮದಲ್ಲಿರುವ ಬಾಲಕರ ವಸತಿ ನಿಲಯ, ಪಟ್ಟಣದ ಕೆಎಚ್ಬಿ ಕಾಲೋನಿಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ತಾಲೂಕಿನ ಮುರ್ಕವಾಡ ಗ್ರಾಮದಲ್ಲಿರುವ ಬಾಲಕರ ವಸತಿ ನಿಲಯ, ಯಲ್ಲಾಪೂರ ನಾಕಾದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕ ವಸತಿ ನಿಲಯ, ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ ಮತ್ತು ಚರ್ಚ ರಸ್ತೆಯಲ್ಲಿರುವ ಪರಿಶಿಷ್ಟ ವಸತಿ ನಿಲಯ ಮತ್ತು ಸದಾಶಿವ ನಗರದಲ್ಲಿರುವ ಹಾಸ್ಟೇಲ್ಗಳಿಗೆ ಭೇಟಿ ನೀಡಿ ಅಲ್ಲಿಯ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಸತಿ ನಿಲಯಗಳ ಕಟ್ಟಡದಲ್ಲಿರುವ ಮೂಲಭೂತ ಸೌಕರ್ಯಗಳು, ವಿದ್ಯುತ ಸಂಪರ್ಕ, ಆಹಾರದ ತಯಾರಿಕೆ, ಆಹಾರದ ದಿನಚರಿ, ಮಲಗುವ ಕೋಣೆ ಅಲ್ಲಿ ನೀಡಿರುವ ಹಾಸಿಗೆ, ಶುದ್ದ ಕುಡಿಯುವ ನೀರು, ಒದಗಿಸಲಾಗುತ್ತಿರುವ ಪೌಷ್ಠಿಕ ಆಹಾರದ ಪ್ರಮಾಣ, ಶೌಚಾಲಯಗಳ ವ್ಯವಸ್ಥೆ, ನೈರ್ಮಲ್ಯಕೆ ನೀಡಲಾಗಿರುವ ಮಹತ್ವ ಸೇರಿದಂತೆ ಸರ್ಕಾರ ನೀಡುವ ವಿವಿಧ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರÀಲ್ಲದೇ ಬಾಲಕಿಯರಿಗಾಗಿ ಇರುವ ಪೋಕ್ಸೋ ಕಾಯಿದೆಯ ಕುರಿತು ತಿಳುವಳಿಕೆಯನ್ನು ನೀಡಿದರು. ಹಾಸ್ಟೇಲ್ಗಳಿಗೆ ದಿಢೀರ ಭೇಟಿ ನೀಡಿದಾಗ ಸಿಬ್ಬಂದಿಗಳು ಹಾಜರಿದ್ದು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.
Leave a Comment