ಹೊನ್ನಾವರ : ಪಟ್ಟಣದ ಗುಡ್ಲಕ್ ಹೊಟೇಲ್ ಎದುರಿನ ಸರ್ವೇ ನಂಬರ್ 303ಕ ಜಾಗ ಸರ್ಕಾರಿ ಸರ್ಕಾರಿ ಜಾಗ ಎಂದು ಸಾರ್ವಜನಿಕರಿಗೆ ತಿಳಿಯುವಂತೆ ಸರ್ಕಾರಿ ಆಸ್ತಿ ಎಂದು ಪ್ರಿಂಟೆಡ್ ನಾಮಫಲಕ ಹಾಕಬೇಕು ಎಂದು ಆಗ್ರಹಿಸಿ ಹೊನ್ನಾವರÀ ಅಟೋರಿಕ್ಷಾ ಚಾಲಕರ ಸಂಘ ಮತ್ತು ಸಾರ್ವಜನಿಕರು À ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಜಾಗದಲ್ಲಿ ಹಲವು ವರ್ಷಗಳಿಂದ ರಸ್ತೆ ಇದ್ದು ರಿಕ್ಷಾ ಮತ್ತು ಟೇಂಪೋ ನಿಲ್ದಾಣಗಳಿಗೆ ಉಪಯೊಗಿಸಿಕೊಂಡು ಬರಲಾಗಿದೆ ಎಂದಿದ್ದಾರೆ. ಪಟ್ಟಣದಲ್ಲಿ ಶಾಂತತೆಯನ್ನು ಬಯಸದ ಕೆಲವರು 303ಕ ಇದು ವರ್ಕ್ಬೊರ್ಡ್ ಜಾಗವಾಗಿದೆ. ಈ ಜಾಗದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದ್ದು ಕಂಪೌಂಡ್ ಹಾಕುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಜಿಲ್ಲಾಧಿಕಾರಿಯವರು ಈ ಹಿಂದೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ತನಕ ಬಗೆಹರಿಸಿಲ್ಲ. ತಕ್ಷಣ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ರಿಕ್ಷಾ ಯೂನಿಯನ್£ ಸದಸ್ಯರಾದÀ ದತ್ತಾತ್ರೆಯ ನಾಯ್ಕ, ಪ್ರಕಾಶ ನಾಯ್ಕ, ಜಾಕಿ ಡಿಸೋಜಾ ಈಶ್ವರಮೇಸ್ತ, ದಿನೇಶ್ ನಾಯ್ಕ್, ಶ್ರೀಧರ ಹೆಗಡೆ, ಉಮೇಶ ಸಾರಂಗ, ಆಗ್ನೇಲ್ ಡಾಯಸ್, ದಾಮೋದರ ನಾಯ್ಕ ಮತ್ತಿತರು ಉಪಸ್ಥಿತರಿದ್ದರು.
Leave a Comment