ಹೊನ್ನಾವರ .ಕಲೆ ಮನುಷ್ಯನ ಅವಿಭಾಜ್ಯ ಅಂಗ. ಕಲೆಯನ್ನು ಪ್ರೀತಿಸಿ ಗೌರವಿಸುವ ಮೂಲಕ ಭಾರತೀಯ ಎಲ್ಲಾ ಕಲೆಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದರಲ್ಲೂ ಯಕ್ಷಗಾನ ತಾಳಮದ್ದಲೆ ಜ್ಞಾನ- ಸಂಸ್ಕಾರ, ಆನಂದ ಇವೆಲ್ಲವನ್ನು ಕೊಡುವ ನಿಧಿ ಎಂದು ವಿದ್ಯಾ ವಾಚಸ್ಪತಿ ವಾಸುದೇವ ಸಾಮಗ ನುಡಿದರು. ಅವರು ಶ್ರೀ ರಾಘವೇಶ್ವರ ಭಾರತೀ ಸಭಾ ಭವನದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಜಿ.ಪಂ.ಸದಸ್ಯ ಶ್ರೀ ಕಲಾ ಶಾಸ್ತ್ರೀಮಾತನಾಡಿ ಯಕ್ಷಗಾನ ತಾಳಮದ್ದಳೆ ಮೂಲತ ಜೀವನದಲ್ಲಿಯ ತಪ್ಪು ಒಪ್ಪುಗಳನ್ನು ಸರಳವಾಗಿ ಮಾರ್ಮಿಕವಾಗಿ ಅರಿಯುವ ಭಾಗ್ಯ ದೊರಕುತ್ತದೆ. ಕಲಾರಾದಕರಿಗೆ ಸನ್ಮಾನ ಮಾಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಿದಂತೆ. ಇಂತಹ ಕಲೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು Àರು.
ವಾಸುದೇವ ಸಾಮಗರ ಮಾತನಾಡಿ ಬಾಳು ಆಯುರಾರೋಗ್ಯ ಭಾಗ್ಯದಿಂದ ಕೂಡಿರಲಿ. ಕಲೆಯನ್ನು ಸುದೀರ್ಘ ಕಾಲ ಜೀವನಾಡಿಯಾಗಿ ಪೋಷಿಸಿದ ವಾಸುದೇವ ಸಾಮಗರ ಅಸ್ಖಲಿತ ವಾಣಿ ಮಹಾನಂದ ನೀಡುತ್ತದೆ ಎಂದರು.
ಕಾರ್ಯಕ್ರಮದ ಸಂಯೋಜಕ ಸಂಯುಕ್ತ ಪ್ರಾಚಾರ್ಯ ವಿ.ಜಿ.ಹೆಗಡೆ ಮಾತನಾಡಿ. ಕಲಾರಾಧನೆ ಮನುಷ್ಯನ ಆದ್ಯ ಕರ್ತವ್ಯ ಅದನ್ನು ನಿಭಾಯಿಸುವುದರ ಮೂಲಕ ಆದರ್ಶ ಸಮಾಜ ಕಟ್ಟುವ ಕೆಲಸ ಆಗಬೇಕಿದೆ ಎಂದರು.
. ಕಾರ್ಯಕ್ರಮದಲ್ಲಿ ಉಪಸ್ಥಿತರಾದ ಮುಖ್ಯ ಅತಿಥಿ ಯಕ್ಷರಂಗದ ಸಂಪಾದಕ ಗೋಪಾಲಕೃಷ್ಣ ಭಾಗವತಮಾತನಾಡಿ ಕಲೆಯಿಂದ ಕಲೆಗಾಗಿ ಕಲೆಗೋಸ್ಕರ ಸಾಮಗರ ಕುಟುಂಬ ಈ ನಾಡಿನಲ್ಲಿ ಸುಪ್ರಸಿದ್ಧವಾಗಿದೆ. ಕಲೆಗಾಗಿ ಗಳಿಸದ್ದನ್ನು ದಾನ ಮಾಡುವ ಮೂಲಕ ಸಾಮಗರು ಅಭಿನಂದನಾರ್ಹರು ಎಂದರು.
ಮಂಡಲ ಪಂಚಾಯತ ಅಧ್ಯಕ್ಷರಾದ ಸರೇಶ ಶೆಟ್ಟಿ ಉಪಸ್ಥಿರಿದ್ದು ಶುಭ ಕೋರಿದರು. ಹಡಿನಬಾಳ ರಾಘಶ್ರೀ ಅಧ್ಯಕ್ಷ, ಶಿವಾನಂದ ಭಟ್ಟ ಸರ್ವರನ್ನು ಸ್ವಾಗತಿಸಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಕುರಿತು ತಿಳಿಸಿದರು. ಪ್ರಾಚಾರ್ಯರಾದ ವಿದ್ವಾನ್ ಗಣೇಶ ಭಟ್ಟ ಧನ್ಯವಾದ ಸಮರ್ಪಿಸಿದರು. ಅತಿಕಾಯ ಕಾಳಗ ಯಕ್ಷಗಾನ ತಾಳ ಮದ್ದಲೆ ಸಂಯಂಮಂ ಇವರಿಂದ ಮನ ಮೆಚ್ಚುವ ರೀತಿಯಲ್ಲಿ ಪ್ರದರ್ಶನ ಕಂಡಿತು.
Leave a Comment