ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಪರಿಶೀಲನೆಯ ಬಳಿಕ ಕಣದಲ್ಲಿದ್ದ 75 ಅಭ್ಯರ್ಥಿಗಳ ಪೈಕಿ ಗುರುವಾರ 5ಜನ ಪಕ್ಷೇತರ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು ಅಂತಿಮವಾಗಿ 70 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಉಳಿದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ 3 ಭಾಗದ ಚುನಾವಣಾಧಿಕಾರಿಗಳಾದ ವಿದ್ಯಾಧರ ಗುಳಗುಳಿ, ಪರಶುರಾಮ ಗಸ್ತೆ ಹಾಗೂ ಸಮೀರಮ್ಮದ ಮುಲ್ಲಾ ನಾಮಪತ್ರ ಹಿಂಪಡೆಯಲು ದಿ.23 ಕೊನೆಯ ದಿನವಾದ ಇಂದು 5 ಜನ ಪಕ್ಷೇತರರೇ ನಾಮಪತ್ರ ಹಿಂಪಡೆದಿದ್ದಾರೆ.
ಹಿಂಪಡೆದವರು:- ವಾರ್ಡ ನಂ-19ರಿಂದ ಕರೆವ್ವಾ ಕೊರವರ, ವಾರ್ಡ ನಂ-20, ಫಾರುಕಅಹಮ್ಮದ ಬಾಳೆಕುಂದ್ರಿ, ವಾರ್ಡ ನಂ-21ರಿಂದ ಅಕ್ಬರಸಾಬ ಡಂಗೆವಾಲೆ ಹಾಗೂ ಲಾರೇನ್ಸ್ ಪಿಂಟೋ ಇರ್ವರು ಹಾಗೂ ವಾರ್ಡ ನಂ-22ರಿಂದ ರತ್ನಾ ಅಮೊನಕರ ನಾಮಪತ್ರ ಹಿಂಪಡೆದಿದ್ದಾರೆ.
ಹಳಿಯಾಳದ ಒಟ್ಟೂ 23 ವಾರ್ಡಗಳಲ್ಲಿ ಕಾಂಗ್ರೇಸ್-23, ಬಿಜೆಪಿ-23, ಜೆಡಿಎಸ್-15, ಪಕ್ಷೇತರ-9 ಹೀಗೆ ಅಂತಿಮವಾಗಿ 70 ಅಭ್ಯರ್ಥಿಗಳ ಚುನಾವಣಾ ಕಣದಲ್ಲಿದ್ದಾರೆ.
-:ಹಳಿಯಾಳ ಪುರಸಭೆಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು:-
ವಾರ್ಡ ನಂ-1, ಮೀಸಲಾತಿ ಪ್ರವರ್ಗ ಅ:– ಶ್ರೀನಿವಾಸ ಎಚ್ ಬಡಿಗೇರ ಕಾಂಗ್ರೇಸ್, ಚಂದ್ರಕಾಂತ ಜಿ ಕಮ್ಮಾರ-ಬಿಜೆಪಿ, ಅನ್ವರಅಮ್ಮದ ಮುಲ್ಲಾ ಜೆಡಿಎಎಸ್.
ವಾರ್ಡ-2, ಸಾಮಾನ್ಯ ಕ್ಷೇತ್ರಕ್ಕೆ:– ಶಂಕರ(ತಾನಾಜಿ) ಎಮ್ ಪಟ್ಟೇಕರ-ಬಿಜೆಪಿ, ಯಲ್ಲಪ್ಪಾ ಕೆಸರೆಕರ-ಕಾಂಗ್ರೇಸ್, ಸನಾವುಲ್ಲಾ ಚಿಗರಿ-ಜೆಡಿಎಸ್.
ವಾರ್ಡ ನಂ-3, ಪ್ರವರ್ಗ-ಅ:– ನಾಗರಾಜ ಯಲ್ಲಪ್ಪಾ ಸಾಣಿಕೊಪ್ಪ-ಬಿಜೆಪಿ, ನವೀನ ಪಿ ಕಾಟಕರ-ಕಾಂಗ್ರೇಸ್. ವಾರ್ಡ ನಂ-4, ಪರಿಶಿಷ್ಠ ಜಾತಿ:- ಮಂಜುನಾಥ ಗಜಾಕೋಶ-ಬಿಜೆಪಿ, ಪ್ರಭಾಕರ ಗಜಾಕೋಶ-ಕಾಂಗೈ, ರವಿ ವಡ್ಡರ-ಜೆಡಿಎಸ್ ಹಾಗೂ ಸುಶಾಂತ ಚವ್ವಾಣ-ಪಕ್ಷೇತರ.
ವಾರ್ಡ ನಂ-5, ಪರಿಶಿಷ್ಠ ಜಾತಿ:- ಸಂತೋಷ ವಿ ಘಟಕಾಂಬಳೆ-ಬಿಜೆಪಿ, ತುಕಾರಾಮ ಜಾವಳ್ಳಿ-ಕಾಂಗ್ರೇಸ್, ಸಿದ್ರಾಮಪ್ಪಾ ದಾನಪ್ಪನವರ-ಪಕ್ಷೇತರ.
ವಾರ್ಡ ನಂ-6, ಸಾಮಾನ್ಯ :- ಪ್ರಕಾಶ ಕೊನಪ್ಪನವರ-ಬಿಜೆಪಿ, ಅಜರುದ್ದಿನ ಬಸರಿಕಟ್ಟಿ-ಕಾಂಗ್ರೇಸ್ ಹಾಗೂ ಪ್ರಕಾಶ ಹರಕುಣಿ ಜೆಡಿಎಸ್.
ವಾರ್ಡ ನಂ-7, ಸಾಮಾನ್ಯ :– ಶಿವಾಜಿ ನರಸಾನಿ-ಬಿಜೆಪಿ, ಸಂತೋಷ ಬೆಳಗಾಂವಕರ-ಕಾಂಗ್ರೇಸ್, ರಮೇಶ ಪೂಜಾರಿ-ಜೆಡಿಎಎಸ್ನಿಂದ ಹಾಗೂ ಪಕ್ಷೇತರರಾಗಿ ಪ್ರಸಾದ ಹುನ್ಸವಾಡಕರ, ವಾಮನ ಪೂಜಾರಿ ಹಾಗೂ ಶಂಕರ ನಿಂಗಪ್ಪಾ ಬೆಳಗಾಂವಕರ.
ವಾರ್ಡ ನಂ-8, ಸಾಮಾನ್ಯ ಮಹಿಳೆ:– ಸಲಿಮಾಬಿ ಇಟ್ಟಂಗಿವಾಲೆ-ಬಿಜೆಪಿ, ನಜಮಾ ಕೊಲ್ಲಾಪುರ-ಜೆಡಿಎಸ್, ಮುಸತಹಾಜ್ ಬಸಾಪೂರ-ಕಾಂಗ್ರೇಸ್.
ವಾರ್ಡ ನಂ-9, ಪರಿಶಿಷ್ಠ ಪಂಗಡ :-ಗೋಪಾಲ ಗರಗ-ಬಿಜೆಪಿ ಹಾಗೂ ಸುರೇಶ ವಗ್ರಾಯಿ-ಕಾಂಗ್ರೇಸ್.
ವಾರ್ಡ ನಂ-10, ಹಿಂದೂಳಿದ ವರ್ಗ-ಬ :- ಆನಂದ ಆರ್ ಕಂಚನಾಳಕರ-ಬಿಜೆಪಿ, ಮೊಹನ ಮೇಲಗಿ ಕಾಂಗ್ರೇಸ್.
ವಾರ್ಡ ನಂ-11, ಹಿಂದೂಳಿದ ವರ್ಗ-ಅ ಮಹಿಳೆ :-ರಾಜೇಶ್ವರಿ ವಾಸು ಪೂಜಾರಿ-ಬಿಜೆಪಿ, ದ್ರೌಪದಿ ಅಗಸರ-ಕಾಂಗ್ರೇಸ್, ಬಿಬಿಸಫಿಯಾ ದುರ್ಗಾಡಿ-ಜೆಡಿಎಸ್.
ವಾರ್ಡ ನಂ-12, ಹಿಂದೂಳಿದ ವರ್ಗ-ಅ ಮಹಿಳೆ :- ನುಸರತ ಅಬ್ದುಲ್ಸತ್ತಾರ ಶೇಖ-ಬಿಜೆಪಿ, ಸಾಯಿರಾಬಾನು ಮುಗದ- ಕಾಂಗ್ರೇಸ್, ಶಭನಾ ಸೈಯದಲಿ ಅಂಕೋಲೆಕರ-ಜೆಡಿಎಸ್ ಹಾಗೂ ಅಮಿನಾಬಾನು ಹಾಜಿಬೆರಿ-ಪಕ್ಷೇತರ.
ವಾರ್ಡ ನಂ-13, ಸಾಮಾನ್ಯ ಮಹಿಳೆ :- ರಾಜೇಶ್ವರಿ ಲಿಂಗರಾಜ ಹಿರೇಮಠ- ಬಿಜೆಪಿ, ಪೂಜಾ ಪ್ರಭುದೇವ ದೇಸಾಯಿಸ್ವಾಮಿ-ಕಾಂಗ್ರೇಸ್ ಹಾಗೂ ಚಾಂದಬಿ ನದಾಫ-ಜೆಡಿಎಸ್.
ವಾರ್ಡ ನಂ-14, ಸಾಮಾನ್ಯ :- ಉದಯಕುಮಾರ ಶ್ರೀಕಾಂತ ಹೂಲಿ-ಬಿಜೆಪಿ, ಸತ್ಯಜೀತ ಗಿರಿ-ಕಾಂಗ್ರೇಸ್ ಹಾಗೂ ಕಾಮೇಲ್ ಡಿ ಸಿಕ್ವೇರಾ-ಪಕ್ಷೇತರ.
ವಾರ್ಡ ನಂ-15, ಸಾಮಾನ್ಯ ಮಹಿಳೆ :- ಶಾಂತಾ ಹನುಮಂತ ಹೆರೆಕರ-ಬಿಜೆಪಿ ಹಾಗೂ ಹನೋರಿಯಾಮಾಲಾ ಬ್ರಗಾಂಜಾ-ಕಾಂಗ್ರೇಸ್.
ವಾರ್ಡ ನಂ-16, ಸಾಮಾನ್ಯ ಮಹಿಳೆ :– ನೀತಾ ಭಂಡಗಿ-ಬಿಜೆಪಿ, ಸುವರ್ಣಾ ಮಾದರ –ಕಾಂಗ್ರೇಸ್, ಲಕ್ಷ್ಮೀ ಗದಗ-ಜೆಡಿಎಸ್.
ವಾರ್ಡ ನಂ-17, ಸಾಮಾನ್ಯ :- ಯಲ್ಲಪ್ಪಾ ಹೊನ್ನೊಜಿ-ಬಿಜೆಪಿ, ಸುರೇಶ ತಳವಾರ-ಕಾಂಗ್ರೇಸ್.
ವಾರ್ಡ ನಂ-18, ಹಿಂದೂಳಿದ ವರ್ಗ-ಅ, ಮಹಿಳೆ :- ರೂಪಾ ಅನಿಲ ಗಿರಿ-ಬಿಜೆಪಿ ಹಾಗೂ ರೇಷ್ಮಾ ಮನಿಯಾರ –ಕಾಂಗ್ರೇಸ್.
ವಾರ್ಡ ನಂ-19, ಪರಿಶಿಷ್ಠ ಜಾತಿ ಮಹಿಳೆ :- ಯಲ್ಲವ್ವಾ ಕೊರವರ- ಬಿಜೆಪಿ, ಲಕ್ಷ್ಮೀ ವಡ್ಡರ-ಕಾಂಗ್ರೇಸ್.
ವಾರ್ಡ ನಂ-20, ಹಿಂದೂಳಿದ ವರ್ಗ-ಅ :- ಫಯಾಜಅಹಮ್ಮದ ಶೇಖ-ಕಾಂಗ್ರೇಸ್, ಸುಭಾಷ ನಾಯ್ಕ-ಬಿಜೆಪಿ, ಜಾನುಲ್ಲಾ ಬಳಿಗಾರ-ಜೆಡಿಎಸ್.
ವಾರ್ಡ ನಂ-21, ಸಾಮಾನ್ಯ :- ಸಂತಾನ ಕಾಮೇಲ್ ಸಾವಂತ-ಬಿಜೆಪಿ, ಅನಿಲ ಪಿರಾಜಿ ಗೌಳಿ-ಕಾಂಗ್ರೇಸ್, ಪ್ರಕಾಶ ಗಿರಿ-ಜೆಡಿಎಸ್.
ವಾರ್ಡ-22, ಸಾಮಾನ್ಯ ಮಹಿಳೆ :- ಸಂಗೀತಾ ಜಾಧವ-ಬಿಜೆಪಿ, ಮೆಹಬೂಬಿ ಮುಲ್ಲಾ-ಜೆಡಿಎಸ್, ಸುನಿತಾ ಜಾಧವ-ಕಾಂಗ್ರೇಸ್.
ವಾರ್ಡ ನಂ-23, ಸಾಮಾನ್ಯ ಮಹಿಳೆ :- ಮಾಲಾ ಹುಂಡೇಕರ- ಬಿಜೆಪಿ, ಶಮಿನಾಬಾನು ಜಂಬುವಾಲೆ-ಕಾಂಗ್ರೇಸ್, ಶಾರದಾ ಡಂಬರೂ-ಜೆಡಿಎಸ್ ಹಾಗೂ ಲಕ್ಷ್ಮೀ ವಿ ಅನಗೊಂಡ-ಪಕ್ಷೇತರ.
Leave a Comment