ಹೊನ್ನಾವರ: ರಕ್ಷಾ ಬಂದನದ ಮೂಲಕ ರಾಷ್ಟ್ರೀಯತೆ ಹೆಚ್ಚು ಮಾಡಬೇಕು, ನಮ್ಮ ದೇಶ ಆದ್ಯಾತ್ಮಿಕಕ್ಕೆ ಅಪಾರ ಕೊಡುಗೆ ನೀಡಿದೆ. ಅವುಗಳನ್ನು ಉಳಿಸಿ ಬೆಳೆಸಿ ಮುಂದುವರೆಸಿಕೊಂಡು ಹೋಗಬೇಕು ಎಂದು ಆರ್ಯುರ್ವೇದಿಕ ತಜ್ಞರು ಹಾಗು ಆರ್ಎಸ್ಎಸ್ ಸದಸ್ಯರಾದ ಡಾ.ಮಂಜುನಾಥ.ಕೆ ಕರೆ ನೀಡಿದರು.
ತಾಲೂಕಿನ ಆರ್ಎಸ್ಎಸ್ ಹಡಿನಬಾಳ ಘಟಕದ ವತಿಯಿಂದ ಕಡಗೇರಿ ಶ್ರೀ ಗಣೆಶೋತ್ಸವ ಸಭಾಭವನದಲ್ಲಿ ರವಿವಾರದಂದು ನಡೆದ ರಕ್ಷಾ ಬಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ದೇಶದ ಮೂಲ ಪುರುಷ ಹಿಂದು ಈ ಮೂಲ ಪುರುಷ ಸಂಘಟಿತವಾದರೆ ದೇಶ ಉಳಿಯುತ್ತೆ. ದೇಶ ಜಾತಿ,ಮತ,ಪಂತ, ಭಾಷೆ ಇವುಗಳಿಂದ ಮೇಲೆದ್ದು ಬರಬೇಕು. ಸ್ವತಂತ್ರ್ಯಕ್ಕಾಗಿ ಹೋರಾಟ ನಡೆಯುವಾಗ ನಮ್ಮ ಹಿರಿಯ ಪಣತೊಟ್ಟಿರುವುದು, ತ್ಯಾಗ-ಬಲಿದಾನಗಳನ್ನು ಮರೆಯಬಾರದು. ನಮಗೆ ಸಿಕ್ಕ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು. ಅಂತೆಯೇ ರಕ್ಷಾ ಬಂದನದ ಮಹತ್ವದ ಕುರಿತು ವಿವರಿಸುತ್ತಾ ರಕ್ಷಾ ಬಂದನದ ಮೂಲಕ ರಾಷ್ಟ್ರೀಯತೆ ಹೆಚ್ಚು ಮಾಡಬೇಕು, ನಮ್ಮ ದೇಶ ಆದ್ಯಾತ್ಮಿಕಕ್ಕೆ ಅಪಾರ ಕೊಡುಗೆ ನೀಡಿದೆ. ಅವುಗಳನ್ನು ಉಳಿಸಿ ಬೆಳೆಸಿ ಮುಂದುವರೆಸಿಕೊಂಡು ಹೋಗಬೇಕು ಎಂದರು. ಇಂದು ನಮ್ಮ ದೇಶದಲ್ಲಿ ಅಲ್ಲೊಲ ಕಲ್ಲೋಲ ಸೃಷ್ಟಿ ಮಾಡುವ ವಿದ್ವಂಶಕ ಕೃತ್ಯಗಳು, ಮಹಾ ಘಟಬಂದನಗಳು, ಈ ದೇಶವನ್ನು ಮೂಲೆಗೆ ತಳ್ಳುವ ಯೋಚನೆಗಳು ನಡೆಯುತ್ತಿದೆ. ಅದಕ್ಕಾಗಿ ನಾವು ರಾಷ್ಟ್ರ ರಕ್ಷಣೆಗಾಗಿ ಸರಿಯಾದ ದೆಶೆಯಲ್ಲಿ ನಡೆಯಬೇಕಾಗಿದೆ ಎಂದು ಕರೆ ನೀಡಿದರು.
ಖರ್ವಾ ಗ್ರಾಮ ಪಂಚಾಯತ್ ಅದ್ಯಕ್ಷ ಮಾಬ್ಲೆಶ್ವರ ನಾಯ್ಕ ಮಾತನಾಡಿ ಅಣ್ಣತಂಗಿಯರ ಪ್ರೀತಿ ಬಾಂದವ್ಯದ ಸಂಕೇತವಾದ ರಕ್ಷಾ ಬಂದನವು ಪವಿತ್ರವಾದದು.ಅಂತೇಯೇ ಸಾಮಾಜಿಕ ಸಾಮರಸ್ಯಕ್ಕಾಗಿ ರಕ್ಷಾ ಬಂದನದಂತಹ ಕಾರ್ಯಕ್ರಮಗಳು ನಡೆಯಬೇಕು. ಈ ಮೂಲಕ ಪ್ರೀತಿ, ಬಾಂದವ್ಯ, ಸೌಹಾರ್ದತೆ ಮೂಡಬೇಕು ಎಂದು ರಕ್ಷಾ ಬಂದನದ ಶುಭಾಶಯ ಕೋರಿದರು.
ನಂತರ ಆರ್ಎಸ್ಎಸ್ ಸದಸ್ಯರು ಒಬ್ಬರಿಗೊಬ್ಬರು ರಾಕಿ ಕಟ್ಟುವ ಮೂಲಕ ಹಿಂದುಗಳ ಪವಿತ್ರ ಹಬ್ಬವಾದ ರಕ್ಷಾ ಬಂದನ ಆಚರಿಸಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
Leave a Comment