ಶಾಸಕ ಸುನೀಲ ನಾಯ್ಕರಿಂದ ಮೂಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಣೆ ದಿನಾಂಕ: 29-08-2018 ರಂದು ತಾಲೂಕ ಪಂಚಾಯತ, ಕಾರ್ಯಾಲಯದ ಶಾಸಕರ ಕಛೇರಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಚೆಕ್ ವಿತರಣಾ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಸುನೀಲ್ ಬಿ. ನಾಯ್ಕ ರವರು ಭಟ್ಕಳ ಹೊನ್ನಾವರ ತಾಲೂಕಿನ 9 ಅರ್ಹ ಫಲಾನುಭವಿಗಳಲ್ಲಿ 8 ಫಲಾನುಭವಿಗಳಿಗೆ ಒಟ್ಟು ರೂ. 3,08,030/-ಲಕ್ಷ ಚೆಕ್ ಮೂಲಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ, ವಿ.ಎನ್. ಬಾಡ್ಕರ, ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಕೃಷ್ಣ ನಾಯ್ಕ, ಆಸರಕೇರಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ದೇವಡಿಗ, ತಾಲೂಕ ಪಂಚಾಯತ ಸದಸ್ಯ ಶ್ರೀ ಹನುಮಂತ ನಾಯ್ಕ, ಬೆಳಕೆ ಗ್ರಾ.ಪಂ ಅಧ್ಯಕ್ಷ ಶ್ರೀ ರಮೇಶ ನಾಯ್ಕ, ಸುಬ್ರಾಯ ನಾಯ್ಕ, ಕೈಕಿಣಿ, ಮತ್ತಿತರರು ಹಾಜರಿದ್ದರು.
Leave a Comment