ಹಳಿಯಾಳ: ಕಂಡು ಕೆಳರಿಯದ ಭೀಕರ ಜಲಪ್ರಳÀಯದಿಂದ ಅಪಾರ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ನೇರೆ ಸಂತ್ರಸ್ಥರಿಗಾಗಿ ಹಳಿಯಾಳ ತಾಲೂಕಿನ ಬುಡಕಟ್ಟು ಅರಣ್ಯವಾಸಿಗಳಾದ ಸಿದ್ದಿ ಸಮುದಾಯದವರು ಸಹಾಯ ಹಸ್ತ ಚಾಚಿದ್ದು ತಮ್ಮ ಸಮುದಾಯದವರಿಂದಲೇ 62 ಸಾವಿರ ರೂ. ಪರಿಹಾರ ಧನ ಸಂಗ್ರಹಿಸಿ ತಹಶಿಲ್ದಾರ್ ಅವರಿಗೆ ಹಸ್ತಾಂತರಿಸಿದ್ದಾರೆ.
ತಾಲೂಕಿನ ಸಿದ್ದಿ ಸಮುದಾಯದವರಿಂದ ಕೊಡಗು ಜಿಲ್ಲಾ ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸಿದ ಒಟ್ಟು 62,280ರೂ ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ತಲುಪಿಸುವಂತೆ ಕೋರಿ ಗುರುವಾರ ಪಟ್ಟಣದ ಮಿನಿವಿಧಾನ ಸೌಧದಕ್ಕೆ ಆಗಮಿಸಿ ತಹಸೀಲ್ದಾರ ವಿದ್ಯಾಧರ ಅವರಿಗೆ ಚೆಕ್ನ್ನು ನೀಡಿದರು.
ಈ ಸಂದರ್ಭದಲ್ಲಿ ಸಿದ್ದಿ ಸಮುದಾಯದ ಮುಖಂಡ ದಿಯೋಗ ಸಿದ್ದಿ, ಸುನೀಲ ಸಿದ್ದಿ, ಇಮಾಮ ಹುಸೇನ ಸಿದ್ದಿ, ನನ್ನೆ ಸಾಬ ಸಿದ್ದಿ, ಸಿಮಾಂವ ಸಿದ್ದಿ, ರೆಹಮಾನ ಸಿದ್ದಿ, ಬೀಯಾಮಾ ಸಿದ್ದಿ, ಮೇರಿ ಸಿದ್ದಿ ಇದ್ದರು.
Leave a Comment