ಹಳಿಯಾಳ:- ಪಟ್ಟಣದ ಪುರಸಭೆ ಸಭಾಭವನದಲ್ಲಿ ಕರ್ನಾಟಕ ರಾಜ್ಯ ದಲೀತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣದ ಜಿಲ್ಲಾ ಮಟ್ಟದ ಸಭೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ತಿರಕಪ್ಪಾ ಕೆ. ಚಿಕ್ಕೇರಿ ತಿಳಿಸಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಕಾಂತ ಸುಭಾಸ ಕಾದ್ರೋಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಉತ್ತರ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಕಲ್ಲಪ್ಪಾ ಎಸ್ ಕಾದ್ರೋಳ್ಳಿ ಅವರನ್ನು ಹಾಗೂ ಹಳಿಯಾಳ ತಾಲೂಕಾ ಅಧ್ಯಕ್ಷರನ್ನಾಗಿ ಬಸವರಾಜ ನಾಗಪ್ಪಾ ಮೇತ್ರಿಯನ್ನು ಮತ್ತು ಮುಂಡಗೋಡ ತಾಲೂಕಾ ಅಧ್ಯಕ್ಷರನ್ನಾಗಿ ಡೆವಿಡ್ ರವಿ ನಡಕಿನಮನಿ ಹಾಗೂ ಮಹಿಳಾ ಜಿಲ್ಲಾ ಅಧ್ಯಕ್ಷರನ್ನಾಗಿ ಅನಿತಾ ಮಂಜಪ್ಪಾ ಮಾದರ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳು :- ಮಹಾದೇವ ಹರಿಜನ – ಹಳಿಯಾಳ ತಾಲೂಕಾ ಕಾರ್ಯಾಧ್ಯಕ್ಷ, ದುರ್ಗಪ್ಪಾ ಶ್ರೀಕಾಂತ ಮೇತ್ರಿ – ತಾಲೂಕಾ ಪ್ರಧಾನ ಕಾರ್ಯದರ್ಶಿ, ಗೋಪಾಲ ಮೇಳಪ್ಪಾ ಮೇತ್ರಿ – ತಾಲೂಕಾ ಗೌರವಾಧ್ಯಕ್ಷರು, ರಾಜು ಯಲ್ಲಪ್ಪಾ ಮೇತ್ರಿ – ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ರಾಜ್ಯ ಉಪಾಧ್ಯಕ್ಷ ಆನಂದ ಮಾದರ, ರಾಜ್ಯ ಮಹಿಳಾ ಉಪಾಧ್ಯಕ್ಷೆ ಸುಮನ ಗೀರಿಷ ಹರಿಜನ, ಉ.ಕ. ಜಿಲ್ಲಾ ಅಧ್ಯಕ್ಷ ಗೀರಿಶ ಹರಿಜನ ಹಾಗೂ ದಾಂಡೇಲಿ ತಾಲೂಕಾ ಅಧ್ಯಕ್ಷ ಚಂದ್ರಕಾಂತ ನಡಿಗೇರ ಇದ್ದರು.
Leave a Comment