
ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣದಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಳೆದ ಒಂದು ವಾರದಿಂದ ಬಿಕೋ ಎನ್ನುತಿತ್ತು. ಪ್ರವಾಸಿಗರು
ಇಲ್ಲಿನ ಮಹಾಗಣಪತಿ, ಮಹಾಬಲೇಶ್ವರ ದೇವಾಲಯದಲ್ಲಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದರೆ, ಅತ್ತ ಓಂ ಬೀಚ್, ಕುಡ್ಲೆ ಬೀಚ್, ಮುಖ್ಯ ಕಡಲ ತೀರದಲ್ಲಿ
ಕಡಲ ಸೌಂದರ್ಯಕ್ಕೆ ಮುಗಿಬಿದ್ದು ನೀರಿನಲ್ಲಿ ಆಟಾಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಇಲ್ಲಿನ ಕ್ಷೇತ್ರದ ಹಿನ್ನಲೆ ಮತ್ತು ಗ್ರಾಮೀಣ ಸೊಗಡು ಆಕರ್ಷಣೀಯವಾಗಿದ್ದರಿಂದ ಎಲ್ಲರೂ ನೋಡಲೇ ಬೇಕಾದ ಒಂದು ಸುಂದರ ಪುಣ್ಯಕ್ಷೇತ್ರವಾಗಿದೆ
ಈ ನಮ್ಮ *ಗೋಕರ್ಣ.*
Leave a Comment