“ಜೀವನದ ಸಣ್ಣ ಸಣ್ಣ ಅನುಭವಗಳನ್ನು ಅಖಂಡವಾಗಿ ನೋಡಿ ಶಾಶ್ವತ ಆನಂದದ ರಸಲೋಕ ಕಟ್ಟಿಕೊಟ್ಟು ಪ್ರಕೃತಿಯಲ್ಲಿ ದೈವತ್ವವನ್ನು ತೋರಿಸಿದವರು ರವೀಂದ್ರನಾಥ ಠಾಗೋರರು. ಪ್ರಾಚೀನತೆ ಆಧುನಿಕತೆಯನ್ನು ಸಮತೋಲಿತವಾಗಿ ರೂಡಿಸಿಕೊಂಡು ಗೀತಾಂಜಲಿಯಂತಹ ಕೃತಿ ರಚಿಸಿ ಭಾರತದ ಸಾಹಿತ್ಯ ಶಕ್ತಿ ಜಗತ್ತಿಗೆ ತೋರಿಸಿಕೊಟ್ಟವರು. ಸಾಹಿತ್ಯಕ್ಕೆ ನೊಬೆಲ್ ಪುರಸ್ಕಾರವನ್ನು ದೊರಕಿಸಿಕೊಟ್ಟು ಭಾರತದ ಕೀರ್ತಿಯನ್ನು ಬೆಳಗಿದರು”ಎಂದು ಡಾ:ಸುರೇಶ ತಾಂಡೇಲ ತಿಳಿಸಿದರು. ಅವರು ಸೇಂಟ್ ಥಾಮಸ್ ಫ್ರೌಡಶಾಲೆಯಲ್ಲಿ ನಡೆದ ರವೀಂದ್ರ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ಸೋಲೊಮನ್ ವೈ ಬೈಲೂರ್ರವರು ವಹಿಸಿದ್ದರು. ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿಗಳು ರವೀಂದ್ರರ ಗೀತೆಗಳನ್ನು ಹಾಡಿದರು. ರವೀಂದ್ರರ ಕುರಿತು ಕನ್ನಡ, ಇಂಗ್ಲೀಷ ಹಾಗೂ ಹಿಂದಿಯಲ್ಲಿ ಭಾಷಣ ಏರ್ಪಡಿಸಲಾಗಿತ್ತು. ಹಿರಿಯ ಶಿಕ್ಷಕರಾದ ಎಸ್.ಎ.ನಾಯ್ಕ, ಹಿರಿಯ ಶಿಕ್ಷಕಿಯಾದ ಶ್ರೀಮತಿ ಶಕುಂತಲಾ ರಾವ್ ಮತ್ತಿತರರು ಉಪಸ್ಥಿತರಿದ್ದರು.
Leave a Comment