ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ಇಡಗುಂಜಿ ಸಮೀಪ ಶರಾವತಿ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಶನಿವಾರ ಮುಂಜಾನೆ 7.30 ರ ಸುಮಾರಿಗೆ ಶರಾವತಿ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಂಕಿ ಠಾಣೆಗೆ ಸುದ್ದಿಮುಟ್ಟಿಸಿದಾಗ ತಕ್ಷಣ ಸ್ಥಳಕ್ಕಾಗಮಿಸಿದ ಪಿ.ಎಸ್.ಐ ಕುಮಾರಿ ನೀತು ಗುಡೆ ಹಾಗೂ ಸಿಬ್ಬಂದಿಗಳು ದೋಣಿಯವರ ಸಹಾಯದಿಂದ ಶವವನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೃತಪಟ್ಟವನನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹನುಮಂತಪ್ಪ ಲಕ್ಷ್ಮಣ ಗುರಣ್ಣವರ್ ಎಂದು ಗುರುತಿಸಲಾಗಿದ್ದು ಗಾರೆ ಕೆಲಸಕ್ಕೆ ಬಂದಿದ್ದ ಎನ್ನಲಾಗಿದೆ ಸ್ನಾನಕ್ಕೆಂದು ನೀರಿಗಿಳಿದಾಗ ಮುಳುಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು ಈ ಕುರಿತು ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment