ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಘಟಸ್ಥಾಪನೆಯ ದಿನದಿಂದ 9 ದಿನಗಳ ಕಾಲ ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ವಿಜೃಂಭಣೆಯಿಂದ ನಡೆಯುವ ವಿಶಿಷ್ಠ ಕಾರ್ಯಕ್ರಮ “ದುರ್ಗಾದೌಡ” ಧಾರ್ಮಿಕ ಕಾರ್ಯಕ್ರಮಕ್ಕೆ ಹಳಿಯಾಳವು ಮನಸೋತಿದ್ದು ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದಿ.10ರಿಂದ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವ ದುರ್ಗಾದೌಡಗೆ ಕ್ಷಣಗಣನೆ ಆರಂಭವಾಗಿದೆ.
ಹಿನ್ನೆಲೆ:- ಮೂಲತಃ ಮಹಾರಾಷ್ಟ್ರದ ಸಾಂಗಲಿಯ ಆರ್.ಎಸ್.ಎಸ್ ಪ್ರಚಾರಕ ಗುರೂಜಿ ಎಂದೇ ಖ್ಯಾತಿಯ ಸಂಭಾಜಿ ಭೀಡೆ 22 ವರ್ಷದ ಹಿಂದೆ ಪ್ರಾರಂಭಿಸಿದ ಈ ದುರ್ಗಾದೌಡ ನವರಾತ್ರಿ ಪರ್ವದಲ್ಲಿ ಮಹಾರಾಷ್ಟ್ರದಲ್ಲಂತೂ ಅತಿ ಅದ್ದೂರಿಯಾಗಿ ನಡೆಯುತ್ತದೆ. ಇತ್ತೀಚೆಗೆ ಕರ್ನಾಟಕದ ಬೆಳಗಾವಿ, ಖಾನಾಪುರ ತಾಲೂಕುಗಳಲ್ಲಿ ಈ ದುರ್ಗಾದೌಡ ಪ್ರಾರಂಭವಾಗಿ ಹಳಿಯಾಳಕ್ಕೆ ಕಾಲಿಟ್ಟು ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಹಳಿಯಾಳದ ವಿವಿಧ ಹಿಂದೂ ಸಂಘಟನೆಗಳು ಹಾಗೂ ಶಿವಪ್ರತಿಷ್ಠಾನ ನೇತೃತ್ವದಲ್ಲಿ 50 ಜನರಿಂದ ಆರಂಭವಾದ ಈ ಧಾರ್ಮಿಕ ಓಟ ಇಂದು 10 ಸಾವಿರದ ಗಡಿ ದಾಟಿರುವುದು ದಾಖಲೆಯಾಗಿದೆ.
ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಾಂತರ ಭಾಗದಲ್ಲಿ ಮಾತ್ರ ನಡೆಯುವ ಈ ವಿಶೀಷ್ಠ ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು, ವೃದ್ದರೆÉನ್ನದೆ ಹುಮ್ಮಸ್ಸಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡು ದೇವಿಯರ ಆರಾಧನೆ ಮಾಡುತ್ತಾರೆ.
ದುರ್ಗಾದೌಡ ಹಿನ್ನೆಲೆ ಸಾರ್ವಜನೀಕರು ಸ್ವಯಂಪ್ರೇರಿತವಾಗಿ ಶ್ರಮದಾನಗಳನ್ನು ಮಾಡುತ್ತಾರೆ. ತಮ್ಮ ಬಡಾವಣೆ, ಗಲ್ಲಿಗಳಲ್ಲಿ ಬರುವ ದೌಡನ್ನು ಸ್ವಾಗತಿಸಲು ಬೃಹತ್ ರಂಗೋಲಿಗಳು, ತಳಿರು ತೊರಣಗಳು, ಕೆಸರಿ ಪತಾಕೆಗಳು, ಭಗವಾಧ್ವಜಗಳಿಂದ ಶೃಂಗರಿಸುವುದು ಮಾತ್ರವಲ್ಲದೇ ತಮ್ಮ ಮಕ್ಕಳಿಗೆ ನವದುರ್ಗೆಯರ, ವೀರ ವನಿತೆಯರ, ರಾಧಾ ಕೃಷ್ಣ,ಶಿವಾಜಿ, ಭಾರತಾಂಬೆ ಇತ್ಯಾದಿ ಛದ್ಮವೇಷಗಳನ್ನು ತೊಡಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೆಪಿಸುವುದು ಕಾರ್ಯಕ್ರಮ ವಿಶೀಷ್ಠವಾಗಿ ರೂಪುಗೊಳ್ಳುವಂತೆ ಮಾಡುತ್ತದೆ. ಅಲ್ಲದೇ ಈ 9 ದಿನಗಳ ಕಾಲ ಹಳಿಯಾಳ ಸಂಪೂರ್ಣ ಕೇಸರಿಮಯವಾಗಿ ಪರಿವರ್ತನೆಯಾಗುವುದು ವಿಶೇಷವಾಗಿದೆ.
ಅಕ್ಟೊಬರ್ 10ರಂದು ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿರುವ ದುರ್ಗಾದೌಡನಲ್ಲಿ ಪ್ರತಿದಿನ ಬೆಳಗಿನ ಜಾವ ಶ್ರದ್ಧೆಯಿಂದ ಒಂದು ದೇವಸ್ಥಾನದ ಆವರಣದಲ್ಲಿ 5.30 ಗಂಟೆಗೆ ಜಮಾವಣೆಗೊಳ್ಳುವ ಹಿಂದೂ ಧರ್ಮಿಯರು ಆ ದೇವರ ಪೂಜೆ ನೆರವೇರಿಸಿ ಭಜನೆಗಳೊಂದಿಗೆ, ವಾಧ್ಯ ಘೋಷ, ದೇವರ, ಮಹಾತ್ಮರ ಘೋಷಣೆಗಳೊಂದಿಗೆ ಮುಂದಿನ ದೇವಸ್ಥಾನದವರೆಗೆ ಧಾರ್ಮಿಕ ನಡಿಗೆ ಮಾಡುತ್ತಾರೆ.
ಈ ಮಹಾ ಮೆರವಣಿಗೆಯಲ್ಲಿ ಕೇಸರಿ ಬಣ್ಣದ ಭಗವಾಧ್ವಜ ಹಿಡಿದು ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತಾ ಸಾಗುವ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು, ಪುರುಷರು ಹೀಗೆ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಹಿಂದೂ ಧರ್ಮಿಯರು ದುರ್ಗಾದೌಡ್ ಧಾರ್ಮಿಕ ಓಟದಲ್ಲಿ ಧಾರ್ಮಿಕ, ಶೃದ್ದಾಭಕ್ತಿಯ ಸಂಗಮವನ್ನೇ ಬರೆಯುತ್ತಾರೆ.
ವಿಶೀಷ್ಠ ಉಡುಗೆ :- ಈ ಬಾರಿ ದುರ್ಗಾದೌಡಗೆ ವಿಶಿಷ್ಠ ಉಡುಗೆ-ಪೋಷಾಕುಗಳನ್ನು ಸಂಘಟಕರು ಸೂಚಿಸಿದ್ದು-ಶೀವಾಜಿ ಮಹಾರಾಜರ ಭಾವಚಿತ್ರವಿರುವ ಕೇಸರಿ ಶಾಲು, ಕುರ್ತಾ, ರುದ್ರಾಕ್ಷಿ ಸರದೊಂದಿಗೆ ದೊಡ್ಡದಾದ ಸೂರ್ಯನ ಲಾಕೆಟ್ ಹಾಗೂ ಕೇಸರಿ ಪೇಟಾ ಈ ಬಾರಿಯ ದೌಡನ ವಿಶೇಷ ಪೊಷಾಕು ಆಗಿದೆ.
ಅ.ದಿ.10 ಬುಧವಾರದಿಂದ ದಿ.18 ಗುರುವಾರದ ವರೆಗೆ 9 ದಿನಗಳ ಕಾಲ ನಡೆಯುವ ದೌಡ ಕೊನೆಯ ದಿನ ಬೃಹತ್ ಸಮಾವೇಶದ ಮೂಲಕ ಕೊನೆಗೊಳ್ಳುತ್ತದೆ.
Leave a Comment