ಹೊನ್ನಾವರ: ಪಟ್ಟಣ ಪಂಚಾಯತ್ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅದ್ಯಕ್ಷರಾಗಿ ನಿಲಕಂಠ ನಾಯ್ಕ ಪುನರ್ ಆಯ್ಕೆಯಾದರು
ಕಳೆದ ಜುಲೈನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ನಾಗೇಶ್ ಮೇಸ್ತ ಹಾಗೂ ನೀಲಕಂಠ ನಾಯ್ಕ ಚುನಾವಣೆಯ ಕಣದಲ್ಲಿದ್ದರು. ನೀಲಕಂಠ ನಾಯ್ಕ ಬೆಂಬಲಿಸಿ ಸದಸ್ಯರಾದ ರವೀಂದ್ರ ನಾಯ್ಕ, ಸುರೇಶ್ ಎಸ್.ಮೇಸ್ತ, ಸಿ.ಜಿ ನಾಯ್ಕ, ಶೀಲಾ ಹೊನ್ನಾವರ, ಜೈನಾಬಿ ಇಸ್ಮಾಯಿಲ್ ಸಾಬ್, ತಾರಾ ಕುಮಾರಸ್ವಾಮಿ,ಜಮಿಲಾಬಿ ಶೆಖ್,ನೀಲಕಂಠ ನಾಯ್ಕ, ಸೇರಿ ಎಂಟು ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ನಾಗೇಶ್ ಮೇಸ್ತ ಪರವಾಗಿ ತುಳಸಿದಾಸ್ ಪುಲ್ಕರ್, ಬಾಲಕೃಷ್ಣ ಬಾಳೇರಿ, ಸುರೇಶ್ ಶೇಟ್, ಮಹಾಲಕ್ಮೀ ಹರಿಜನ್, ಉದಯ್ ನಾಯ್ಕ, ದಾಮೋದರ ಮೇಸ್ತ ಹಾಗೂ ನಾಗೇಶ್ ಮೇಸ್ತರ ಮತ ಸೇರಿ ಎಳು ಮತಗಳನ್ನು ಪಡೆದಿದ್ದರು. ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದ್ದರು. ಒಂದು ಮತಗಳ ಅಂತರದಿಂದ ನೀಲಕಂಠ ನಾಯ್ಕ ಜಯಭೇರಿ ಬಾರಿಸಿದ್ದರು. ಚುನಾವಣೆ ಅಧಿಕಾರಿಯಾಗಿ ಪ.ಪಂ ಮುಖ್ಯಾಧಿಕಾರಿ ಆರ್.ಎಮ್ ಪಾಟೀಲ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟಿದ್ದರು. ಪ.ಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ ನೀಲಕಂಠ ನಾಯ್ಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೊಷೀಸಿದ್ದರು.
ಪುನರ್ ಆಯ್ಕೆಗೆ ಕಾರಣ ಏನು?: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಕಣದಲ್ಲಿದ್ದ ಪ.ಪಂ ಸದಸ್ಯ ನಾಗೇಶ್ ಮೆಸ್ತ 30-07-2018ರಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಗುಪ್ತ ಮತದಾನವಾಗದೇ ಚುನಾವಣಾ ಪ್ರಕ್ರಿಯೆ ಉಲ್ಲಂಘನೆಯಾಗಿರುವ ಬಗ್ಗೆ ಲೋಪದೋಷಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ದೂರಿನ ಹಿನ್ನಲೆ ಜಿಲ್ಲಾನಗರಾಭಿವೃದ್ದಿಕೋಶದಿಂದ ಪ.ಪಂ ಮುಖ್ಯಾಧಿಕಾರಿಗಳಿಗೆ ನೋಟಿಸ್ ನೀಡಿದ್ದು ಚುನಾವಣಾ ಪ್ರಕ್ರಿಯೆಯನ್ನು ಮರು ಪರಿಶಿಲಿಸಿ ವರದಿ ನಿಡಬೇಕೆಂದು ಪತ್ರದಲ್ಲಿ ತಿಳಿಸಿದ್ದರು. ಪತ್ರ ಬಂದ ಹಿನ್ನಲೆ ಪ.ಪಂ ನಿಂದ ತಹಸಿಲ್ದಾರ್ ಅವರಿಗೆ ಪತ್ರ ಮುಖೆನ ತಿಳಿಸಿದ್ದು ಚುನಾವಣಾ ಪ್ರಕ್ರಿಯೆ ನಡೆದ ಸಂಧರ್ಬದಲ್ಲಿ ಸಭೆಯ ಮುಖ್ಯಾಧಿಕಾರಿಗೆ ಕರ್ನಾಟಕ ಪುರಸಭಾ ಅಧಿನಿಯಮದ ಪ್ರಕಾರ ಗುಪ್ತ ಮತದಾನದ ಬಗ್ಗೆ ಸಭೆಗೆ ಓದಿ ಹೇಳಲು ಮಾತನಾಡಲು ಅವಕಾಶ ಮಾಡದೇ ನಿಯಮಕ್ಕೆ ವಿರುದ್ದವಾಗಿ ಸದಸ್ಯರ ಒತ್ತಾಯದ ಮೇರೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಏಕಾಏಕಿ ಸ್ಥಾಯಿ ಸಮಿತಿ ಚೆರ್ಮೆನ್ರನ್ನು ಘೋಷಣೆ ಮಾಡಿ ಜಯಶಾಲಿ ಅಂತಾ ಠರಾವು ಮಾಡಿದ್ದಾರೆ. ಇದು ಕರ್ನಾಟಕ ಪುರಸಬೆಗಳ ಅಧಿನಿಯಮ 1964ರ ನಿಯಮಾವಳಿಗೆ ಸಾಮಾನ್ಯ ಸಭೆಯು ಕೈಗೊಂಡಿರುವ ಠರಾವು ನಂ466ನ್ನು ರದ್ದುಪಡಿಸಿ ಉಳಿದ ಅವಧಿಗೆ ಹೊಸದಾಗಿ ಸ್ಥಾಯಿ ಸಮಿತಿಯನ್ನು ರಚಿಸಲು ನಿರ್ದೇಶನ ನಿಡಬೇಕೆಂದು ಕೋರಿದ್ದರು.
Leave a Comment