ಹಳಿಯಾಳ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಹಾಗೂ ಉತ್ತೇಜನ ನೀಡುವ ಉದ್ದೇಶದಿಂದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಶಿಷ್ಯವೇತನವನ್ನು ವಿತರಿಸಲಾಗುತ್ತಿದೆ ಎಂದು ಟ್ರಸ್ಟ್ ಧರ್ಮದರ್ಶಿಗಳಾದ ರಾಧಾಬಾಯಿ ಆರ್. ದೇಶಪಾಂಡೆ ಹೇಳಿದರು.
ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ್ಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ 2017-18 ನೇ ಸಾಲಿನ ಎಸ್.ಎಸ್.ಎಲ್.ಸಿಯ 711, ಪಿ.ಯು.ಸಿ.ಯ-222 ವಿದ್ಯಾರ್ಥಿಗಳು ಸೇರಿದಂತೆ ಒಟ್ಟೂ 933 ವಿದ್ಯಾರ್ಥಿಗಳಿಗೆ 5.77 ಲಕ್ಷ ರೂ ಗಳ ಶಿಷ್ಯವೇತನವನ್ನು ವಿತರಿಸಿ ಅವರು ಮಾತನಾಡಿದರು.
ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಲು ಬೇಕಾದ ಸಕಲ ನೇರವು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನೀಡುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಸಂಸ್ಕøತ ಪ್ರಾಧ್ಯಾಪಕ ವಿದ್ವಾನ ಅನಂತಮೂರ್ತಿ ಭಟ್ ಮಾತನಾಡಿ ವಿದ್ಯೆ ಮಾನವನಿಗೆÀ ಆಭೂಷನವಿದ್ದಂತೆ, ವಿಆರ್ಡಿಎಮ್ ಟ್ರಸ್ಟ್ನಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಷ್ಯವೇತನದ ಪ್ರಯೋಜನ ಪಡೆದುಯುವಂತೆ ಕರೆ ನೀಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ನಿರ್ದೇಶಕಿ ಡಾ. ರೇಖಾ ಎಮ್.ಆರ್, ಡಾ.ಅಂಜು ಗುರುಪ್ರಸಾದ ಆಚಾರಿ, ಶಿಕ್ಷಕ ಸಿದ್ದಪ್ಪಾ ಬಿರಾದಾರ, ಡಿಐವಿಟಿ ಪ್ರಾಂಶುಪಾಲ ದಿನೇಶ ನಾಯ್ಕ, ಟ್ರಸ್ಟ್ನ ವ್ಯವಸ್ಥಾಪಕ ವಿವೇಕ ಹೆಗಡೆ, ಶಿಕ್ಷಕ ಶ್ರೀಧರ ಬುಳ್ಳಣ್ಣ ಇತರರು ಇದ್ದರು.
Leave a Comment