ಹಳಿಯಾಳ:- ಗದಗದ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ದೇಹತ್ಯಾಗದಿಂದ ಸಮಾಜಕ್ಕೆ ಮತ್ತು ಭಕ್ತವರ್ಗಕ್ಕೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಶೋಕ ವ್ಯಕ್ತಪಡಿಸಿದ್ದಾರೆ.
“ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಬಸವಣ್ಣನು ಪ್ರತಿಪಾದಿಸಿದಂತಹ ತತ್ತ್ವಗಳ ನಿಷ್ಠ ಅನುಯಾಯಿಗಳಾಗಿದ್ದರು. ಅವರು ಸಮಾಜದಲ್ಲಿ ಸಮಾನತೆ ಬರಬೇಕೆಂದು ಮತ್ತು ಲಿಂಗ ತಾರತಮ್ಯ ತೊಲಗಬೇಕೆಂದು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಭಕ್ತವರ್ಗಕ್ಕೆ ಯಾವಾಗಲೂ ಸನ್ನಡತೆಯ ಮಾರ್ಗವನ್ನು ತೋರಿಸುತ್ತಿದ್ದ ಅವರ ನಿರ್ಗಮನದಿಂದಾಗಿ ಶೂನ್ಯಭಾವ ಸೃಷ್ಟಿಯಾಗಿದೆ,’’ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
“ಧರ್ಮದ ಒಳಗಿದ್ದುಕೊಂಡೇ ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಪೂಜ್ಯರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ವಿಶೇಷವಾಗಿ ಉತ್ತರಕರ್ನಾಟಕದ ಭಾಗದಲ್ಲಿ ಅವರು ಮನೆಮಾತಾಗಿದ್ದರಲ್ಲದೆ, ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಕಾಯಾ ವಾಚಾ ಮನಸಾ ಶ್ರಮಿಸುತ್ತಿದ್ದರು,’’ ಎಂದು ದೇಶಪಾಂಡೆ ತಮ್ಮ ಶೋಕಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ.
“ಪರಂಪರೆ ಮತ್ತು ಸಮಕಾಲೀನತೆ ಎರಡರ ಬಗ್ಗೆಯೂ ತುಡಿತವನ್ನು ಹೊಂದಿದ್ದ ಪೂಜ್ಯರು, ತಮ್ಮ ಮೌಲಿಕ ಸೇವೆಯಿಂದಾಗಿ ಚಿರಕಾಲ ನೆನಪಿನಲ್ಲುಳಿಯುತ್ತಾರೆ. ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಗೆ ಸಲ್ಲಿಸಿರುವ ಸೇವೆ ಕೂಡ ಅನುಪಮವಾದುದಾಗಿದೆ,’’ ಎಂದು ಸಚಿವರು ಹೇಳಿದ್ದಾರೆ.
Leave a Comment