ಹೊನ್ನಾವರ:
ಮಹಾತ್ಮ ಗಾಂಧಿ 150 ನೇ ವರ್ಷಾಚರಣೆ ನಿಮಿತ್ತ ಆಕರ್ಷಕ ಸ್ಥಬ್ದಚಿತ್ರ ಮೆರವಣೆಗೆಯನ್ನು ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರದ ಮೇರೆಗೆ ಹಮ್ಮಿಕೊಳ್ಳಲಾಗಿತ್ತು.
ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ಜಾಗೃತಿ ಮೂಡಿಸಲು ಮಹಾತ್ಮಾ ಗಾಂಧೀಜಿ ಅವರ ವಿಚಾರಧಾರೆ ಕುರಿತು 2 ಸ್ಥಬ್ಧ ಚಿತ್ರಗಳು ತಾಲೂಕಿಗೆ ಆಗಮಿಸಿದ್ದವು. ಮೊದಲಿಗೆ ಪಟ್ಟಣ ಪಂಚಾಯತಿ ಆವರಣದಲ್ಲಿ ಗಾಂಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸ್ಥಬ್ಧಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶರಾವತಿ ವೃತ್ತದಿಂದ ಬೆಂಗಳೂರು ಸರ್ಕಲ್ವರೆಗೆ ಮೆರವಣೆಗೆ ಸಂಚರಿಸಿತು. ಮೆರವಣೆಗೆಯುದ್ದಕ್ಕೂ ಮಹಾತ್ಮ ಗಾಂಧಿಯವರ ವಿಚಾರಧಾರೆಯ ಧ್ವನಿಸುರುಳಿಯನ್ನು ಪ್ರಸುತ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ.ಆರ್.ಗೌಡ, ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ಚೇರಮನ್ ನೀಲಕಂಠ ನಾಯ್ಕ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನಸೇವಾ ಕ್ರೀಡಾಧಕಾರಿ ಸುದೇಶ ನಾಯ್ಕ, ದೈಹಿಕ ಶಿಕ್ಷಕಿ ಸಾದನಾ ಬರ್ಗಿ ಪಟ್ಟಣ ಪಂಚಾಯತ ಸದಸ್ಯರು, ತಾಲೂಕ ಪಂಚಾಯತ ಮತ್ತು ಪಟ್ಟಣ ಪಂಚಯತಿ ಅಧಿಕಾರಿಗಳು. ಉಪಸ್ಥಿತರಿದ್ದರು. ಸ್ಥಬ್ದಚಿತ್ರದ ಮೆರವಣೆಗೆಯ ಉಸ್ತುವಾರಿಯನ್ನು ವಾರ್ತಾ ಇಲಾಖೆಯ ಅಧಿಕಾರಿ ಆನಂದ ವಹಿಸಿದ್ದರು.
Leave a Comment