
ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ದಸರಾ ಅಂಗವಾಗಿ ನಡೆಯುವ ಪ್ರಸಿದ್ದ
ದಾಂಡೇಲಪ್ಪಾ ಜಾತ್ರೆಯನೋ. ಮುಗಿಯಿತು? ಆದರೆ ಜಾತ್ರೆಯಿಂದ ಉಂಟಾಗಿರುವ ಮಾಲಿನ್ಯ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವುದಂತು ಸತ್ಯ.
ನೂರಾರು ಅಂಗಡಿಕಾರರು ಬಿಸಾಡಿ ಹೊಗಿರುವ ಹಾಗೂ ಸಹಸ್ರಾರು ಭಕ್ತರು, ಸಾರ್ವಜನಿಕರು ಚೆಲ್ಲಿ ಹೊಗಿರುವ ಪ್ಲಾಸ್ಟಿಕ್, ಕವರ್ , ಬಾಟಲಿಗಳು ಇತರೇ ಪರಿಸರ ಮಾರಕ ವಸ್ತುಗಳು ದಾಂಡೇಲಪ್ಪಾ ದೇವಸ್ಥಾನಕ್ಕೆ ತೇರಳುವ ನಾಲ್ಕೂ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ಕಾಣ ಸಿಗುತ್ತಿದೆ.
ಆದ್ದರಿಂದ ಪ್ಲಾಸ್ಟಿಕ್ ಕಸ ಮುಕ್ತ
ಮಾಡಿ ಪರಿಸರ ಸಂರಕ್ಷಣೆ ಮಾಡಲು ಕಾಗದ ಕಾರ್ಖಾನೆಯ ಗೇಟ್ ನಂಬರ 3 ” ರಿಂದಾ ಹಾಳಮಡ್ಡಿಯವರಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬೃಹತ್ ಪ್ರಮಾಣದ
ಪ್ಲಾಸ್ಟಿಕ ಕಸವನ್ನು ಕೂಡಲೇ ದಾಂಡೇಲಿ ನಗರಸಭೆಯವರು ತೆರವುಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಚಂದ್ರು ಮಾಲಿ ಹಾಗೂ ದಾಂಡೇಲಿಯ ಜನತೆಯ ಆಗ್ರಹವಾಗಿದೆ.



Leave a Comment