ಗೋಕರ್ಣ:
ಪುರಾಣ ಪ್ರಸಿದ್ಧ ಹಾಗೂ ಪುಣ್ಯ ಕ್ಷೇತ್ರವಾದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವನ ಹಾಗೂ ಗಂಗಾಮಾತೆಯ ಮದುವೆ ಪೂರ್ವಭಾವಿ ನಿಶ್ಚಿತಾರ್ಥ ಕಾರ್ಯಕ್ರಮ ಬುಧವಾರದಂದು ನಡೆಯಿತು.
ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು.
ರಾತ್ರಿ ಹತ್ತು ಗಂಟೆ ನಂತರ ಗಂಗಾವಳಿ ಗಂಗಾಮಾತಾ ದೇವಾಲಯ ಸಮೀಪ ಜನಸಾಗರದ ಜಾತ್ರೆ ರಾತ್ರಿಯಿಡೀ ನಡೆದಿತ್ತು.
ಈ ಸಂದರ್ಭದಲ್ಲಿ
ಊರ ನಾಗರಿಕರು, ಎಲ್ಲಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು.



Leave a Comment