
ಬೆಂಗಳೂರು:- ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಬಿಜೆಪಿಯ ಅನಂತಕುಮಾರ್ ಇಂದು ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸತತ ಆರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಇವರು ಮಾತುಗಾರಿಕೆಯಿಂದಲೇ ಹೆಸರು ಮಾಡಿದವರಾಗಿದ್ದರು.
ಕಳೆದೆರಡು ತಿಂಗಳಿನಿಂದ ಕರುಳಿನ ಕ್ಯಾನ್ಸರ್ ನಿಂದ ತೊಂದರೆ ಅನುಭವಿಸುತಿದ್ದ ಅನಂತಕುಮಾರ್ ಚಿಕಿತ್ಸೆಗಾಗಿ ಲಂಡನ್ ಮತ್ತು ಅಮೇರಿಕಾಕ್ಕೆ ತೆರಳುದ್ದರು .
ಆದರೇ ಚುಕಿತ್ಸೆಯಿಂದ ಗುಣಮುಖರಾಗದ ಅವರನ್ನು ಮರಳಿ ಬೆಂಗಳೂರಿಗೆ ಕರೆತರಲಾಗಿದ್ದು ಇಂದು ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ಇಹಲೋಕ ತೆಜಿಸಿದ್ದಾರೆ.


Leave a Comment