ಹಳಿಯಾಳ: ಕಳೆದ 43 ವರ್ಷಗಳಿಂದ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಈ ಬಾರಿಯ 44ನೇ ಪಾದುಕೆ ಸಂಚಾರ ಹಾಗೂ ಭಿಕ್ಷಾಟನಾ ಕಾರ್ಯಕ್ರಮ ಮುಂದಿನ ಮೂರು ದಿನಗಳವರೆಗೆ ಹಳಿಯಾಳದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀಧರ ಸ್ವಾಮಿಗಳ ದಿವ್ಯ ಪಾದುಕೆಗಳು ನ.23ರಂದು ಸಾಯಂಕಾಲ ನಗರದ ಗಣೇಶ ಮಂದಿರಕ್ಕೆ ಆಗಮಿಸಲಿದ್ದು, ಅಲ್ಲಿಂದ ದುರ್ಗಾನಗರದ ಮಾರುತಿ ಮಂದಿರದವರೆಗೆ ಭಕ್ತಿ ಪೂರ್ವಕವಾಗಿ ತರಲಾಗುವುದು ಹಾಗೂ ಭಕ್ತರ ದರ್ಶನಕ್ಕಾಗಿ ನ.24ರಿಂದ ನ. 27ರವರೆಗೆ ಪಾದುಕೆಗಳು ಮಾರುತಿ ದೇವಸ್ಥಾನದಲ್ಲಿ ಇರಿಸಲಾಗುವದು.
ಮೂರು ದಿನಗಳವರೆಗೆ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಭಿಕ್ಷಾಟನೆ ಕಾರ್ಯಕ್ರಮ ನಡೆಸಲಿದ್ದಾರೆ. ಭಕ್ತಾಧಿಗಳು ಅವರು ಭಿಕ್ಷೆಗಾಗಿ ಬಂದಾಗ ಅವರ ಜೋಳಿಗೆಯಲ್ಲಿ ಯಥಾ ಶಕ್ತಿ ಧನ ಧಾನ್ಯ ಅಥವಾ ಅಕ್ಕಿ ಬೆಳೆ ತೆಂಗಿನಕಾಯಿಯನ್ನು ಸಲ್ಲಿಸಬಹುದೆಂದು ಹಾಗೂ ಸದ್ಗುರುರವವರ ಪಾದುಕೆಗಳನ್ನು ಮನೆಗೆ ಕರೆಸಿಕೊಂಡು ಪೂಜೆ ಮಾಡುವ ಅವಕಾಶವಿದೆ ಎಂದು ತಿಳಿಸಲಾಗಿದೆ.
Leave a Comment