
ದಾಂಡೇಲಿ :- ದಾಂಡೇಲಿ ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ, ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಗೀತ ತರಗತಿಯ ವಾರ್ಷಿಕೋತ್ಸವ *ಸಹ್ಯಾದ್ರಿ ಸ್ವರ ಸಂಭ್ರಮ* *2018* ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿ ನಡೆಯಿತು.
ಖ್ಯಾತ ಹಿಂದುಸ್ತಾನಿ ಗಾಯಕಿ ವಿದುಷಿ ವಾಣಿ ಹೆಗಡೆ, ಸಂಗೀತ ಕೇಂದ್ರದ ಗುರುಗಳಾದ ಸುಧಾಮ ದಾನಗೇರಿ ಯವರ ಸುಮಧುರ ಕಂಠಸಿರಿಯ ಗಾನಸುಧೆ ಎಲ್ಲರ ಮೆಚ್ಚುಗೆ ಪಡೆದರೇ
ಪುಟಾಣಿ ಮಕ್ಕಳ ಗಾಯನ ಇಂಪಾಗಿ ಮೂಡಿತು. ಸತೀಶ ಹೆಗ್ಗಾರ ಹಾರ್ಮೋನಿಯಂ ಸಾಥ್, ರಾಜೇಂದ್ರ ಹೆಗ್ಗಾರ ತಬಲಾ ಸಾಥ್ ನೀಡಿದರು.


Leave a Comment