ಹಳಿಯಾಳ:- ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದ 2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳದ ಕುಸ್ತಿ ಪಟುಗಳು 8ಚಿನ್ನ, 1ಬೆಳ್ಳಿ ಹಾಗೂ 4 ಕಂಚಿನ ಪದಕಗಳ ಬೇಟೆಯಾಡಿರುವುದಲ್ಲದೇ ಶಿರಸಿ ಶೈಕ್ಷಣ ಕ ಜಿಲ್ಲೆಗೆ ಮಹಿಳಾ ಚಾಂಪಿಯನ್ ಪ್ರಸಶ್ತಿಯು ಬಂದಿರುವುದು ಉಕ ಜಿಲ್ಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಳಿಯಾಳದ ಕ್ರೀಡಾ ವಸತಿ ನಿಲಯದ ಈ ಯುವ ಕುಸ್ತಿ ಪಟುಗಳು ಜಿಲ್ಲಾಮಟ್ಟದಲ್ಲಿ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. 14ಜನ ಕುಸ್ತಿ ಪಟುಗಳು ಹಳಿಯಾಳದಿಂದ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದರು.
17 ವರ್ಷದೊಳಗಿನ ಬಾಲಕಿಯ ವಿಭಾಗದಲ್ಲಿ 4 ಚಿನ್ನ- 1 ಬೆಳ್ಳಿ :- ಕಾವ್ಯಾ ಘಟಗೋಳಕರ 40 ಕೆ.ಜಿ ವಿಭಾಗದಲ್ಲಿ ಪ್ರಥಮ (ಚಿನ್ನದ ಪದಕ), ರೂಪಾ ಕೋಲೆಕರ 43 ಕೆ.ಜಿ ವಿಭಾಗದಲ್ಲಿ ಪ್ರಥಮ (ಚಿನ್ನ), ನಿಖಿತಾ ಢೇಫಿ 46 ಕೆ.ಜಿ ವಿಭಾಗದಲ್ಲಿ ಪ್ರಥಮ(ಚಿನ್ನ), ಸುಜಾತಾ ಪಾಟೀಲ 57 ಕೆ.ಜಿ ವಿಭಾಗದಲ್ಲಿ ಪ್ರಥಮ(ಚಿನ್ನ) ಹಾಗೂ ರಕ್ಷೀತಾ ಸೂರ್ಯವಂಶಿ 49 ಕೆ.ಜಿ ವಿಭಾಗದಲ್ಲಿ ದೀತಿಯ(ಬೆಳ್ಳಿ ಪದಕ) ಗಳಿಸಿದ್ದಾರೆ.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 4 ಚಿನ್ನ -2 ಕಂಚು:- ಸುಲೇಮಾನ ದೇವಕಾರಿ 45 ಕೆ.ಜಿ/ಗ್ರೀಕೊ ರೋಮನ್ ವಿಭಾಗದಲ್ಲಿ ಪ್ರಥಮ(ಚಿನ್ನದ ಪದಕ), ಇದೆ ವಿಭಾಗದಲ್ಲಿ 51 ಕೆ.ಜಿ ತೂಕದಲ್ಲಿ ಕೃಷ್ಣಾ ಯಮನಪ್ಪನವರ ಪ್ರಥಮ(ಚಿನ್ನ), ಶೈಲೇಶ ಸುತಾರ 48 ಕೆ.ಜಿ/ ಫ್ರೀಸ್ಟೈಲ್ ವಿಭಾಗದಲ್ಲಿ ಪ್ರಥಮ ಸ್ಥಾನ, ಉಷಾರತ್ ಮಿರಾಶಿ 51 ಕೆ.ಜಿ / ಫ್ರೀಸ್ಟೈಲ್ ವಿಭಾಗದಲ್ಲಿ ಪ್ರಥಮ, ರೋಹನ ದೊಡ್ಮನಿ 45 ಕೆ.ಜಿ/ಫ್ರೀಸ್ಟೈಲ್ ವಿಭಾಗದಲ್ಲಿ ತೃತೀಯ(ಕಂಚು), ಅಶೋಕ ಮಾಕನ್ನವರ 60 ಕೆ.ಜಿ ಗ್ರೀಕೊ ರೋಮನ್ ವಿಭಾಗದಲ್ಲಿ ತೃತೀಯ ಸ್ಥಾನ.
14 ವರ್ಷದೊಳಗಿನ ಬಾಲಕರ ಸ್ಪರ್ದೆಯಲ್ಲಿ ಶಾಹಿದ ದೇವಕಾರಿ 35 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ, ಶುಭಂ ಯಲ್ಲಪ್ಪಾ ಮಾಲವನಕರ 44 ಕೆ.ಜಿ ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ.
ಪ್ರಥಮ ಸ್ಥಾನ ಪಡೆದ ಎಲ್ಲಾ ಕುಸ್ತಿ ಪಟುಗಳ ದಿನಾಂಕ: 14 ರಿಂದ 19-12-2018ರವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಳಿಯಾಳದ ಕ್ರೀಡಾ ವಸತಿ ನಿಲಯದಲ್ಲಿ ತರಬೇತುದಾರರಾದ ಕಾಡೇಶ ನ್ಯಾಮಗೌಡ ಮತ್ತು ಬಾಳಕೃಷ್ಣ ದಡ್ಡಿ ಉತ್ತಮ ತರಬೇತಿಯನ್ನು ನೀಡುತ್ತಿದ್ದು ವಿದ್ಯಾರ್ಥಿಗಳ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
Leave a Comment