
ಹುಬ್ಬಳ್ಳಿ : ಇಂಡಿಗೋ ಏರ್ಲೈನ್ಸ್ ಸಂಸ್ಥೆಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದುಬೈ, ಬ್ಯಾಂಕಾಂಕ್, ಕೋಲೊಂಬೊ ಸೇರಿದಂತೆ ವಿವಿಧ ದೇಶಗಳಿಗೆ ವಿಮಾನಯಾನ ಸಂಪರ್ಕ ಸೌಲಭ್ಯ ಸೇವೆ ಆರಂಭಿಸಲಿದೆ ಎನ್ನಲಾಗಿದ್ದು ಈ ಕುರಿತು ಸ್ವತಃ ಸಂಸದ ಪ್ರಹ್ಲಾದ ಜೋಶಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಈ ಸೇವೆ ಡಿಸೆಂಬರ್ 1ರಿಂದ ಶುರುವಾಗಲಿದ್ದು, ಮಸ್ಕತ್, ಅಬುದಾಬಿ, ಕುವೈತ್, ದೋಹಾ, ಸಿಂಗಾಪುರ, ಮಾಲೆ ಹಾಗೂ ಫುಕೇಟ್ ದೇಶಗಳಿಗೆ ವಿಮಾನ ಸಂಪರ್ಕ ಸೇವೆ ನೀಡಲಿದೆ. ನಗರದಿಂದ ನೇರ ಸಂಪರ್ಕ ನೀಡದೇ ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಎನ್ನಲಾಗಿದೆ.
ಈ ಕುರಿತಾಗಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಅಧಿಕೃತ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿರುವ ನಿಲ್ದಾಣದ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ, ”ವಿವಿಧ ದೇಶಗಳಿಗೆ ವಿಮಾನ ಸಂಪರ್ಕ ಸೇವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಆಧರಿಸಿ ಹಲವಾರು ನಾಗರಿಕರು ಕರೆ ಮಾಡಿದ್ದರು.
ಸಂಸದರ ಫೇಸ್ಬುಕ್ ಗಮನಿಸಿದಾಗ ತಿಳಿದಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.


Leave a Comment