
ಶಿರಸಿ: – ಮಕ್ಕಳು ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲು ಗೆಲುವು ಮುಖ್ಯವಲ್ಲ ಆಟದ ಸಮಯದಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ಶಿರಸಿ ಎಎಸ್ಪಿ ಡಿ.ಎಲ್.,ನಾಗೇಶ ಹೇಳಿದರು.
ಅವರು ರವಿವಾರ ಶಿರಸಿ ಉಪವಿಭಾಗ ಮಟ್ಟದ ಪೊಲೀಸ್ ಮಕ್ಕಳ ಕ್ರಿÃಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸಿ ರಾಜು ಮೊಗವೀರ ಉದ್ಘಾಟಿಸಿ ಮಾತನಾಡಿ ಇಂತಹ ಕ್ರೀಡಾಕೂಟದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಅವರಲ್ಲಿನ ಪ್ರತಿಭೆ ಹೊರತರಲು ಅವಕಾಶ ಆಗುತ್ತದೆಯೆಂದರು.
ವರ್ಷಪೂರ್ತಿ ಜನರಸೇವೆಗೆ ಮುಂದಾಗುವ ಪೊಲೀಸರು ಅವರ ಕುಟುಂಬದ ಜತೆ ವರ್ಷಕ್ಕೊಮ್ಮೆ ಕ್ರಿಡೆಯಲ್ಲಿ ಭಾಗವಹಿಸಿ ಸಂತಸ ಸಾಧ್ಯ ಆಗುತ್ತದೆ. ಜಗತ್ತೆ ಮಲಗಿದ್ದಾಗ ಪೊಲೀಸರು ಜಾಗೃತರಾಗಿ ಊರ ರಕ್ಷಣೆ ಮಾಡುತ್ತಾರೆ. ಅವರ ಕುಟುಂಬ ಸಮಸ್ಯೆ ಅರಿಯುವದು ಮುಖ್ಯ. ಮನೆ, ಮಕ್ಕಳು ನಿಭಾಯಿಸುವದು ಕಷ್ಟವೇ ಆಗುತ್ತದೆ ಎಂದರು.
ಅತಿಥಿಯಾಗಿ ಸಿದ್ದಾಪುರ ಸಿಪಿಐ ಜಾಯ್ ಅಂತೋನಿ, ಶಿರಸಿ ಸಿಪಿಐ ಗಿರೀಶ, ಮುಂಡಗೋಡ ಪ್ರಭಾರ ಸಿಪಿಐ ಚಂದ್ರಶೇಖರ ಹರಿಹರ, ಪಿಎಸೈಗಳಾದ ಸೀತಾರಾಮ, ಶಿವಕುಮಾರ, ಮಾದೇಶ, ನಿತ್ಯಾನಂದ, ರಘು ಕಾನಡೆ, ಇತರರು ಇದ್ದರು. ೪ತಾಲೂಕುಗಳ ೭ ಠಾಣೆಯ ನೂರಾರು ಪೊಲೀಸರು, ಅವರ ಮಕ್ಕಳು, ಕುಟುಂಬದವರು ಭಾಗವಹಿಸಿದ್ದರು.





Leave a Comment