ಹೊನ್ನಾವರ: ತಾಲೂಕಿನ ಗೇರುಸೋಪ್ಪಾ-ನಗರಬಸ್ತಿಕೇರಿ ಸೀಮೆಯ ಶ್ರೀ ಮುಖ್ಯಪ್ರಾಣ ದೇವ ಶ್ರೀ ಕ್ಷೇತ್ರ ಗೋವರ್ಧನ ಶ್ರೀದೇವರ ಬ್ರಹ್ಮರಥೋತ್ಸವ ಡಿ.15 ಸಂಜೆ 6ಘಂಟೆಗೆ ಜರುಗಲಿದೆ.
ಶ್ರೀ ದೇವರ ಕಾರ್ಯಕ್ರಮವು ಡಿ.14 ರಿಂದ 16ರ ವರೆಗೆ ವೇ||ಕಟ್ಟೆ ಶಂಕರಭಟ್ಟ ನವಿಲಗೋಣ ಇವರ ನೇತ್ರತ್ವದಲ್ಲಿ ಜರುಗಲಿದೆ. ಡಿ.14ರಂದು ಬೆಳಿಗ್ಗೆ 10 ಘಂಟೆಯಿಂದ ದೇವರ ಪ್ರಾರ್ಥನೆ,ಇತರ ಕಾರ್ಯಕ್ರಮಗಳು ನಡೆಯಲಿದ್ದು ಮದ್ಯಾಹ್ನ ದೇವರಿಗೆ ಮಹಾ ನೈವೆದ್ಯ ಪೂಜೆ, ಸಂತರ್ಪಣೆ ನಡೆಯಲಿದೆ. ರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪುಷ್ಪ ರಥೋತ್ಸವ ನಡೆಯಲಿದೆ.15 ರಂದು 6 ಘಂಟೆಗೆ ಶ್ರೀ ದೇವರ ಬ್ರಹ್ಮ ರಥೋತ್ಸವ ಪ್ರಯುಕ್ತ ಈಡಗಾಯಿ, ರಥ ಚಾಲನೆ, ಮೃಗ ಭೇಟೆ,ಪ್ರಸಾದ ವಿತರಣೆ ಹಾಗೂ ರಾತ್ರಿ ಯಕ್ಷಗಾನ ನಡೆಯಲಿದೆ. ಡಿÀ.16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ 4 ಘಂಟೆಗೆ ಋತ್ವಿಕ್ ಸಂಭಾವನೆ, ಆಶಿರ್ವಚನ, ಮಂತ್ರಾಕ್ಷತೆ, ಮಂಗಲ ಸಮಾರಂಭ ನÀಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸೀಮೆಯ ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಭಾಗಿಯಾಗಬೇಕೆಂದು ಶ್ರೀ ದೇವರ ಟ್ರಸ್ಟಿಯ ಅಧ್ಯಕ್ಷ ರಾಮಕೃಷ್ಣ ಸುಬ್ರಾಯ ರಾಯ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment